27.2 C
Karnataka
Friday, January 10, 2025

ಸುರತ್ಕಲ್ : ಸಂಚಾರ ಮಾರ್ಗ ಬದಲಾವಣೆ

ಮಂಗಳೂರು,: ಮಂಗಳೂರು ನಗರದ ಸುರತ್ಕಲ್-ಎಂ.ಆರ್.ಪಿ.ಎಲ್ ರಸ್ತೆಯಲ್ಲಿರುವ ಸುರತ್ಕಲ್ ರೈಲ್ವೆ ಬ್ರಿಡ್ಜ್ ಮೇಲೆ ರಸ್ತೆಯು ಗುಂಡಿಗಳಿಂದ ತುಂಬಿದ್ದು, ರೈಲ್ವೆ ಬ್ರಿಡ್ಜ್ ಕಾಂಕ್ರೀಟಿಕರಣಗೊಳಿಸುವ ಹಿನ್ನಲೆಯಲ್ಲಿ ಫೆಬ್ರವರಿ 8ರವರೆಗೆ 58 ದಿನಗಳ ಕಾಲ ಕಾಮಗಾರಿಯನ್ನು ಕೈಗೊಳ್ಳಲಿರುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ, ಬದಲಿ ಸಂಚಾರ ವ್ಯವಸ್ಥೆಯನ್ನು ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಕಾಮಗಾರಿ ನಡೆಯುವ ಸಮಯ ಸುರತ್ಕಲ್ ಜಂಕ್ಷನ್ ಕಡೆಯಿಂದ ಎಂ.ಆರ್.ಪಿ.ಎಲ್ ಹಾಗೂ ಚೊಕ್ಕಬೆಟ್ಟು ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಬದಲಿ ವಾಹನ ಸಂಚಾರ ವ್ಯವಸ್ಥೆಯ ರಸ್ತೆಗಳು:-
ಉಡುಪಿ ಕಡೆಯಿಂದ ಕೃಷ್ಣಾಪುರ-ಕೈಕಂಬ-ಎಂಆರ್‍ಪಿಎಲ್ ಕಡೆಗೆ ಸಂಚರಿಸುವ ಲಘು ವಾಹನಗಳು ಸುರತ್ಕಲ್ ಸೂರಜ್ ಹೋಟೆಲ್ ಪಕ್ಕದ ರಸ್ತೆಯಲ್ಲಿ ಎಡಕ್ಕೆ ತಿರುಗಿ ಚೊಕ್ಕಬೆಟ್ಟು ಕೃಷ್ಣಾಪುರ/ ಕಾನಾ ಕಡೆಯಿಂದ ಸಂಚರಿಸಬೇಕು. ಉಡುಪಿ ಕಡೆಯಿಂದ ಷ್ಣಾಪುರ-ಕೈಕಂಬ-ಎಂಆರ್‍ಪಿಎಲ್ ಕಡೆಗೆ ಸಂಚರಿಸುವ ಘನ ವಾಹನಗಳು ಹೊನ್ನಕಟ್ಟೆ ಜಂಕ್ಷನ್ ಗೆ ಬಂದು ಎಡಕ್ಕೆ ತಿರುಗಿ ಕುಳಾಯಿ-ಕಾನಾ ರಸ್ತೆ ಮಾರ್ಗದಲ್ಲಿ ಸಂಚರಿಸಬೇಕು.

ಮಂಗಳೂರು ಕಡೆಯಿಂದ ಕೃಷ್ಣಾಪುರ-ಕೈಕಂಬ-ಎಂಆರ್‍ಪಿಎಲ್ ಕಡೆಗೆ ಸಂಚರಿಸುವ ಘನ ವಾಹನಗಳು ಹೊನ್ನಕಟ್ಟೆ ಜಂಕ್ಷನ್‍ಗೆ ಬಂದು ಬಲಕ್ಕೆ ತಿರುಗಿ ಕುಳಾಯಿ-ಕಾನಾ ರಸ್ತೆ ಕಡೆಗೆ ಸಂಚರಿಸಬೇಕು. ಎಂಆರ್‍ಪಿಎಲ್ ಕಡೆಯಿಂದ ಸುರತ್ಕಲ್ ಕಡೆಗೆ ಸಂಚರಿಸುವ ವಾಹನಗಳು ಕಾನಾ ಜಂಕ್ಷನ್‍ನಲ್ಲಿ ಎಡಕ್ಕೆ ತಿರುಗಿ ಕುಳಾಯಿ ಹೊನ್ನಕಟ್ಟೆ ಮಾರ್ಗವಾಗಿ ಸಂಚರಿಸಬೇಕು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles