ಮಂಗಳೂರು:ಯುವ ಲೇಖಕಿ ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಬೆಂಗಳೂರಿನ ಸ್ವಾಭಿಮಾನಿ ಕರ್ನಾಟಕ ವೇದಿಕೆಯ 2023ನೆ ಸಾಲಿನ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಲಭಿಸಿದೆ.
ಡಾ.ಸಿ ಸೋಮಶೇಖರ್ ಮತ್ತು ಸರ್ವಮಂಗಳ ದತ್ತಿ ಪ್ರಶಸಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಮೇ.31 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಡಾ. ಎಚ್.ಎಸ್.ಎಂ. ಪ್ರಕಾಶ್ ಅವರ ಅನುವಾದಿತ ಕೃತಿ ನಮ್ಮಂಥ ಬಲ್ಲಿದವರು, ಪ್ರೊ. ಎಚ್.ಟಿ. ಪೋತೆ ಅವರ ಪ್ರವಾಸ ಕಥನ ಬಾಬಾ ಸಾಹೇಬರ ಲಂಡನ್ ಮನೆಯಲ್ಲಿ, ಫಾತಿಮಾ ರಲಿಯಾ, ಅವರ ಕಥಾ ಸಂಕಲನ ಒಡೆಯಲಾರದ ಒಡಪು, ಸಂತೋಷ ನಾಯಕ ಅವರ ಕವನ ಸಂಕಲನ ಹೊಸ ವಿಳಾಸದ ಹೆಜ್ಜೆಗಳು ಆಯ್ಕೆಯಾಗಿದೆ.
ಡಾ.ಸಿ ಸೋಮಶೇಖರ್ ಮತ್ತು ಸರ್ವಮಂಗಳ ದತ್ತಿ ಪ್ರಶಸ್ತಿ ಗೆಇಂದಿರಾ ಕೃಷ್ಣಪ್ಪ ಅವರ ವ್ಯಕ್ತಿಚಿತ್ರಣ ಸಾವಿತ್ರಿ ಬಾಪುಲೆಮತ್ತು ಡಾ. ಎಂಎಸ್ ಮಣಿ ಅವರ ಲೇಖನ ಸಂಕಲನ ಗವಿಮಾರ್ಗಕೃತಿಗೆ ಲಭಿಸಿದೆ.
ಪ್ರಶಸ್ತಿಯು ತಲಾ 5 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಕರ್ನಾಟಕ ಲೇಖಕಿ ಸಂಘದ ಅಧ್ಯಕ್ಷ ಹೆಚ್ಎಲ್ ಪುಷ್ಪಾ, ಲೇಖಕರಾದ ದ್ವಾರನಕುಂಟೆ ಪಾತಣ್ಣ ಹಾಗೂ ಡಾ. ಸತ್ಯಮಂಗಲ ಮಹಾದೇವ್ ತೀರ್ಪುಗಾರರಾಗಿ ಸಹಕರಿಸಿದ್ದರು. ಮೇ 31ರಂದು ಸಂಜೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.