ಮಂಗಳೂರು: ಆಫ್ರಿಕಾ ಖಂಡದ ತಾಂಜಾನಿಯ ದೇಶದಲ್ಲಿ ನಡೆದ Taliss-IST ಆಹ್ವಾನಿತರ ಅಂತಾರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್ ನಲ್ಲಿ ಮಂಗಳಾ ಸ್ವಿಮ್ಮಿಂಗ್ ಕ್ಲಬ್ ನ ಸದಸ್ಯ ಚಿಂತನ್ ಎಸ್. ಶೆಟ್ಟಿ 15 – 16 ವರ್ಷದ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿ 50 ಮತ್ತು 100 ಮೀಟರ್ ಪ್ರಿಸ್ಟೆಲ್, 50 ಮೀಟರ್ 100 ಮೀಟರ್ ಬಟರ್ ಫೈ ಹಾಗೂ 100 ಮೀಟರ್ ವೈಯಕ್ತಿಕ ಮಿಡ್ಲೆ ಈಜು ಸ್ಪರ್ಧೆಗಳಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಗಳು, 400 ಮೀಟರ್ ವೈಯಕ್ತಿಕ ಮಿಡ್ಲೆ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ, 4+50 ಮೀಟರ್ ಮಿಡ್ಲೆ ರಿಲೆಯಲ್ಲಿ ಕಂಚಿನ ಪದಕಗಳೊಂದಿಗೆ 15-16 ವರ್ಷದ ಬಾಲಕ ವಿಭಾಗದ ವೈಯಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡು ದೇಶಕ್ಕೆ, ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಚಿಂತನ್ ಎಸ್. ಶೆಟ್ಟಿ ಇವರು ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಶ್ರೀ ರಾಮಕೃಷ್ಣ ಹೈಸ್ಕೂಲ್ ವಿದ್ಯಾರ್ಥಿಯಾಗಿರುತ್ತಾರೆ. ಇವರು ಕ್ಲಬ್ ನ ಹಿರಿಯ ಈಜು ತರಬೇತುದಾರರಾದ ಎಂ. ಶಿವಾನಂದ ಗಟ್ಟಿ ಇವರ ಮಾಗದರ್ಶನದಲ್ಲಿ ಅಂತರಾಷ್ಟ್ರೀಯ ಮಟ್ಟದ ತರಬೇತುದಾರರಾದ ಶಿಶಿರ್ ಎಸ್. ಗಟ್ಟಿ (ಎನ್.ಐ.ಎಸ್.), ತರಬೇತುದಾರ ಕೀರ್ತನ್ ಎಸ್. ಶೆಟ್ಟಿ. ಚೇತನ್ ಎಸ್. ಶೆಟ್ಟಿ. ರಾಜೇಶ್ ಖಾರ್ವಿ ಬೆಂಗ್ರೆ ಇವರಿಂದ ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.