17.5 C
Karnataka
Friday, November 22, 2024

ಟಿಕೆಟ್ ರಹಿತ ಪ್ರಯಾಣ: ನೈರುತ್ಯ ರೈಲ್ವೆಯಿ೦ದ 46.31 ಕೋ. ರೂ.ದಂಡ ಸಂಗ್ರಹ

ಬೆ೦ಗಳೂರು: ನೈರುತ್ಯ ರೈಲ್ವೆಯು ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿದ್ದು ಈ ಹಣಕಾಸು ವರ್ಷದ 2023 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು 368205 ಪ್ರಕರಣಗಳನ್ನು ದಾಖಲಿಸಿ, 28.26 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.
ನೈರುತ್ಯ ರೈಲ್ವೆಯ ಟಿಕೆಟ್ ತಪಾಸಣಾ ಸಿಬ್ಬಂದಿ ಈ ಹಣಕಾಸು ವರ್ಷದಲ್ಲಿ ಅಂದರೆ 2023 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ
ಶ್ಲಾಘನೀಯ ಕೆಲಸ ಮಾಡಿದ್ದಾರೆ. ಟಿಕೆಟ್ ರಹಿತ ಮತ್ತು ಅನಿಯಮಿತ ಪ್ರಯಾಣವನ್ನು ತಡೆಯಲು ಎಕ್ಸ್ ಪ್ರೆಸ್, ವಿಶೇಷ ರೈಲುಗಳು ಸೇರಿದಂತೆ ಪ್ರಯಾಣಿಕರ ರೈಲು ಸೇವೆಗಳಲ್ಲಿ ಎಲ್ಲಾ ಅಧಿಕೃತ ರೈಲು ಬಳಕೆದಾರರಿಗೆ ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೇವೆಗಳನ್ನುಖಚಿತಪಡಿಸಿಕೊಳ್ಳಲು ವಿಶೇಷ ಟಿಕೆಟ್ ತಪಾಸಣಾ ಕಾರ್ಯವನ್ನು ಸದಾ ನಿಯಮಿತವಾಗಿ ನಡೆಸಲಾಗುತ್ತಿದೆ.
ನೈರುತ್ಯ ರೈಲ್ವೆಯು ಡಿಸೆಂಬರ್-2023 ವರೆಗೆ ಟಿಕೆಟ್ ರಹಿತ ಪ್ರಯಾಣದ 627014 ಪ್ರಕರಣಗಳನ್ನು ದಾಖಲಿಸಿ, 46.31 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 9.95% ಹೆಚ್ಚಳವಾಗಿದ್ದು ನೈರುತ್ಯ ರೈಲ್ವೆ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ದಂಡ ವಸೂಲಿ ಆಗಿದೆ.
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು 96790 ಪ್ರಕರಣಗಳನ್ನು ದಾಖಲಿಸಿ 6.36 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ. ಬೆಂಗಳೂರು ವಿಭಾಗವು 368205 ಪ್ರಕರಣಗಳನ್ನು ದಾಖಲಿಸಿ 28.26 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.
ಮೈಸೂರು ವಿಭಾಗವು 100538 ಪ್ರಕರಣಗಳನ್ನು ದಾಖಲಿಸಿ 5.91 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಿದೆ.
ನೈರುತ್ಯ ರೈಲ್ವೆಯ ಫ್ಲೈಯಿಂಗ್ ಸ್ಕ್ವಾಡ್ (ಕೇಂದ್ರ ಕಚೇರಿ) ವಿಭಾಗವು 61481 ಪ್ರಕರಣಗಳನ್ನು ದಾಖಲಿಸಿ 5.77 ಕೋಟಿ ರೂ.ಗಳ
ದಂಡವನ್ನು ಸಂಗ್ರಹಿಸಿದೆ.
ರೈಲ್ವೆ ಕಾಯ್ದೆ, 1989 ರ ಸೆಕ್ಷನ್ 138 ರ ಪ್ರಕಾರ, ಯಾವುದೇ ಪ್ರಯಾಣಿಕರು ಸರಿಯಾದ ಪಾಸ್ / ಟಿಕೆಟ್ ಇಲ್ಲದೆ ಪ್ರಯಾಣಿಸುವುದು
ಕಂಡುಬಂದಲ್ಲಿ 250 ದಂಡ ಅಥವಾ ಶುಲ್ಕಕ್ಕೆ ಸಮನಾಗಿರುತ್ತದೆ (ಅವರು ಪ್ರಯಾಣಿಸಿದ ದೂರಕ್ಕೆ ಅಥವಾ ರೈಲು ಪ್ರಾರಂಭವಾದ
ನಿಲ್ದಾಣದಿಂದ ಸಾಮಾನ್ಯ ಏಕ ಶುಲ್ಕ ಮತ್ತು ಹೆಚ್ಚುವರಿ ಶುಲ್ಕಗಳು ಅಂದರೆ 250) ಯಾವುದು ಹೆಚ್ಚಿದೆಯೋ ಅದನ್ನು ವಿಧಿಸಲಾಗುತ್ತದೆ.
ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಟಿಕೆಟ್ ತಪಾಸಣೆಯಲ್ಲಿ ಶ್ಲಾಘನೀಯಪ್ರಯತ್ನಗಳಿಗಾಗಿ ಟಿಕೆಟ್ ತಪಾಸಣಾ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles