ಮಂಗಳೂರು: ಭಾರತ ದೇಶವು ವಿವಿಧ ಸಂಸ್ಕೃತಿ ಸಂಸ್ಕಾರ ಗಳಿಂದ ಕೂಡಿದ್ದರೂ ಎಲ್ಲರೂ ಪ್ರೀತಿ ಸಾಮರಸ್ಯದ ಮೂಲಕ ಜೀವನ ಸಾಗಿಸುತ್ತಿದ್ದಾರೆ ಎಂದು ಕರ್ನಾಟಕ ವಿಧಾನ ಸಭೆ ಸಭಾಪತಿ ಯು ಟಿ ಖಾದರ್ ಹೇಳಿದರು.
ಮಂಗಳೂರು ಲಯನ್ಸ್ ಸೇವಾ ಮಂದಿರ ದಲ್ಲಿ ತೆಲುಗು ಕಲಾ ಸಂಘ ಗಣೇಶೋತ್ಸವದ ಅಂಗವಾಗಿ ಆಯೋಜಿಸಲಾದ ಸಭಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಕಲೆ ಸಂಸ್ಕೃತಿ, ಆಚಾರ, ವಿಚಾರ ಗಳನ್ನು ಮುಂದಿನ ಪೀಳಿಗೆಗ ಕೊಂಡ್ಯೂಯುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಈ ರೀತಿಯ ಹಬ್ಬದ ಆಚರಣೆ ಸಾಮರಸ್ಯ ದ ಸಂಕೇತ ವಾಗಿದೆ ಎಂದು ಹೇಳಿದರು.
ಇದೇ ವೇಳೆ ತೆಲುಗು ಕಲಾ ಸಂಘದ ವತಿಯಿಂದ ಸ್ಪೀಕರ್ ಯು ಟಿ ಖಾದರ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ,ತೆಲುಗು ಕಲಾ ಸಂಘದ ಗೌರವಾಧ್ಯಕ್ಷ ಸಾಂಬಾಶಿವ ರಾವ್, ಅಧ್ಯಕ್ಷ ಡಾ ಕರ್ರ ರಾಮ,ಉಪಾಧ್ಯಕ್ಷ ವಡೆಲ್ಲಾ ವೆಂಕಟ್ ಫಣಿ, ರಾವುರಿ ನಾಗಫಣಿ, ಕಾರ್ಯದರ್ಶಿ ಇನ್ನುಮಲ ಶ್ರೀನಿವಾಸ, ಕೋಶಾಧಿಕಾರಿ ನಾಗವರು ಶ್ರೀನಿವಾಸ, ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಉಪಸ್ಥಿತರಿದ್ದರು.
ಸಂಗೀತ, ನ್ರತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ತೆಲುಗು ಕಲಾ ಸಂಘದ ಸದಸ್ಯರಿಂದ ನಡೆಯಿತು.