ಬಂಟ್ವಾಳ: ಮನೆಯ ಅಟ್ಟದಲ್ಲಿ ಸುಲಿಯದೇ ಇಟ್ಟಿದ್ದ 11 ಗೋಣಿ ಚೀಲ ಅಡಕೆ ಕಳವು ಆಗಿರುವ ಘಟನೆ ಬಂಟ್ವಾಳ ಬೈಪಾಸ್ ರಸ್ತೆ ಬಳಿ ಸ೦ಭವಿಸಿದೆ.
ಬಂಟ್ವಾಳ ಬೈಪಾಸ್ ರಸ್ತೆ ಬಳಿಯ ಕೃಷಿಕರೋವ೯ರು 11 ಗೋಣಿ ಚೀಲದಲ್ಲಿ ಸುಮಾರು 3 ಕ್ವಿಂಟಾಲ್ ಅಡಿಕೆಯನ್ನು ಒಣಗಿಸಿ, ಒಂದು ವಾರಗಳ ಹಿಂದೆ ಮನೆಯ ಅಟ್ಟದಲ್ಲಿ ಇಟ್ಟಿದ್ದರು. ಮಾ. 1 ರಂದು ಸಂಜೆ ಮನೆಗೆ ಬೀಗ ಹಾಕಿ ಹೋಗಿದ್ದವರು ಮರುದಿನ ಬೆಳಿಗ್ಗೆ ಮನೆಗೆ ಬಂದಾಗ, ಮನೆಯ ಹಿಂಬದಿ ಬಾಗಿಲು ತೆರೆದುಕೊಂಡಿರುವುದಲ್ಲದೆ, ಮನೆಯ ಹಿಂಭಾಗದ ಕಿಟಕಿಯ ರಾಡ್ ನ್ನು ತೆರೆದು ಯಾರೋ ಮನೆಯೊಳಗೆ ಪ್ರವೇಶಿಸಿರುವುದು ಕಂಡುಬಂದಿರುತ್ತದೆ. ಮನೆಯನ್ನು ಪರಿಶೀಲಿಸಲಾಗಿ, ಮನೆಯ ಅಟ್ಟದಲ್ಲಿ ಸುಲಿಯದೇ ಇಟ್ಟಿದ್ದ 11 ಗೋಣಿ ಚೀಲ ಅಡಕೆಯನ್ನು (ಸುಮಾರು 60.000 ರೂಪಾಯಿ ಮೌಲ್ಯ) , ಕಳ್ಳರು ಕಳವು ಮಾಡಿಕೊ೦ಡು ಹೋಗಿದ್ದರು.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.