ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಸಹಭಾಗಿತ್ವದಲ್ಲಿ ಆಟಿದ ಗೇನ ಕಾರ್ಯಕ್ರಮ ಆ. 4 ರಂದು ಬೆಳಿಗ್ಗೆ 11.30ಕ್ಕೆ ಉರ್ವಾಸ್ಟೋರ್‍ನ ತುಳು ಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಉರ್ವಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಭಾರತಿ ಜಿ. ಉದ್ಘಾಟಿಸುವರು. ಹಿರಿಯ ಸಂಶೋಧಕಿ, ತುಳು ವಿದ್ವಾಂಸರಾದ ಡಾ. ಇಂದಿರಾ ಹೆಗ್ಡೆ ಆಟಿಯ ಬಗ್ಗೆ ಉಪನ್ಯಾಸ ನೀಡುವರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ μÁ, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ರವಿ ಕುದ್ಮುಲ್ ಗಾರ್ಡನ್ ಮತ್ತಿತರರು ಭಾಗವಹಿಸುವರು.ಹಿಂದಿನ ಕಾಲದ ಆಟಿ ತಿಂಗಳ ಜನ ಜೀವನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯಗಾರ ಹಾಗೂ ಆಟಿಯ ಕುರಿತಾಗಿ ಚಿತ್ರಕಲಾ ಸ್ಪರ್ಧೆಯು ಆಟಿದ ಗೇನ ಕಾರ್ಯಕ್ರಮದಲ್ಲಿ ನಡೆಯಲಿದೆ.
ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಬೆಳಿಗ್ಗೆ 9.30 ರಿಂದ ವಿದ್ಯಾರ್ಥಿಗಳಿಗೆ ಆಟಿಯ ಬದುಕಿನ ಬಗ್ಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.