25.9 C
Karnataka
Monday, April 21, 2025

“90 ಎಮ್ ಎಲ್” ತುಳು ಸಿನಿಮಾಕ್ಕೆ ಶರವು ದೇವಸ್ಥಾನದಲ್ಲಿ ಮುಹೂರ್ತ

ಮಂಗಳೂರು: ಡಿ ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ ಸೋಜ ನಿರ್ಮಾಣದಲ್ಲಿ ತಯಾರಾಗುತ್ತಿರುವ “90 ಎಮ್ ಎಲ್” ತುಳು ಚಲನ ಚಿತ್ರದ ಮುಹೂರ್ತ ಸಮಾರಂಭವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಶರವು ರಾಘವೇಂದ್ರ ಶಾಸ್ತ್ರಿ ಸಿನಿಮಾಕ್ಕೆ ಕ್ಲಾಪ್ ಮಾಡಿದರು.ನಟ ವಿನೀತ್ ಕುಮಾರ್, ನಟಿ ರುಹಾನಿ ಶೆಟ್ಟಿ, ರೋಶನ್ ಶೆಟ್ಟಿ, ಪುಷ್ಪರಾಜ್ ಬೊಳ್ಳೂರು, ನಿರ್ದೇಶಕ ರಂಜಿತ್ ಸಿ ಬಜಾಲ್, ನಿರ್ಮಾಪಕ ಡೋಲ್ಪಿ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.
ವಿನೀತ್ ಕುಮಾರ್ ಅಭಿನಯದ 90 ಎಮ್ ಎಲ್ ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಾಣಾಜೆ, ಉಮೇಶ್ ಮಿಜಾರ್, ಪುಷ್ಪರಾಜ್ ಬೊಳ್ಳೂರು ಅಭಿನಯಿಸಲಿದ್ದಾರೆ.
ರಂಜಿತ್ ಸಿ ಬಜಾಲ್ ಚಿತ್ರಕತೆ, ನಿರ್ದೇಶನ, ಸಂಭಾಷಣೆ ತುಳಸಿದಾಸ್ ಮಂಜೇಶ್ವರ್, ಛಾಯಾಗ್ರಾಹಣ ಅರ್ಜುನ್ ಎಂವಿ, ಸಂಗೀತ ಸೃಜನ್ ಕುಮಾರ್ ತೋನ್ಸೆ, ಸಂಕಲನ ವಿಶಾಲ್ ದೇವಾಡಿಗ, ಪಿಆರ್ ಒ ಬಾಳ ಜಗನ್ನಾಥ ಶೆಟ್ಟಿ, ಡಿಸೈನ್ ಆಚಾರ್ಯ ಗುರು. ಮಂಗಳೂರು ಸುತ್ತ ಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಸಿನಿಮಾ ನಿರ್ದೇಶಕ ರಂಜಿತ್ ಸಿ ಬಜಾಲ್ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles