26.5 C
Karnataka
Wednesday, April 16, 2025

ಉಳ್ಳಾಲ ಉರೂಸ್: ಸಂಚಾರ, ಸ್ವಚ್ಛತೆಗೆ ಆದ್ಯತೆ – ಉಸ್ತುವಾರಿ ಸಚಿವರ ಸೂಚನೆ

ಮ೦ಗಳೂರು: ಐದು ವಷ೯ಗಳಿಗೊಮ್ಮೆ ನಡೆಯುವ ಉಳ್ಳಾಲ ಉರೂಸ್ ಕಾಯ೯ಕ್ರಮದ ಸಂದಭ೯ದಲ್ಲಿ ಉಳ್ಳಾಲ ನಗರದಲ್ಲಿ ಸುವ್ಯವಸ್ಥಿತ ಸಂಚಾರ ಹಾಗೂ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕು ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಅವರು ಶುಕ್ರವಾರ ಉಳ್ಳಾಲ ದಗಾ೯ ಸಭಾಂಗಣದಲ್ಲಿ ಉರೂಸ್ ಸಂದಭ೯ದಲ್ಲಿ ಮೂಲಸೌಕರ್ಯ ಗಳ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಏಪ್ರಿಲ್ 24 ರಿಂದ ಮೇ 18 ರವರೆಗೆ ನಡೆಯುವ ಉರೂಸ್ ಕಾಯ೯ಕ್ರಮದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಉಳ್ಳಾಲಕ್ಕೆ ಸಂಪಕ೯ ಕಲ್ಪಿಸುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ದಾರಿದೀಪ, ವಾಹನ ಪಾಕಿ೯ಂಗ್ ವ್ಯವಸ್ಥೆ, ಆರೋಗ್ಯ ಕೇಂದ್ರ, ಅಂಬ್ಯುಲೆನ್ಸ್ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಅವರು ಸೂಚಿಸಿದರು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಮಾತನಾಡಿ, ಉಳ್ಳಾಲ ಪರಿಸರದ ಸಾಮಾಜಿಕ ಪ್ರಗತಿ, ಸೌಹಾಧ೯ತೆ ಬೆಳೆಸಲು ಉಳ್ಳಾಲ ದಗಾ೯ವು ಐತಿಹಾಸಿಕವಾಗಿ ಕೊಡುಗೆ ನೀಡಿದೆ. ಉರೂಸ್ ಸಂದಭ೯ದಲ್ಲಿ ಸ್ವಚ್ಛತೆಯನ್ನು ಪ್ರತೀದಿನ ನಿವ೯ಹಿಸಬೇಕು. ದೇಶ ವಿದೇಶಗಳಿಂದ ಯಾತ್ರಿಕರು ಆಗಮಿಸುವುದರಿಂದ ಉಳ್ಳಾಲವನ್ನು ಸ್ವಚ್ಛ ನಗರವಾಗಿ ಕಾಪಾಡಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಯಿಂದ ಉಳ್ಳಾಲ ಪ್ರವೇಶಿಸುವ ಜಂಕ್ಷನ್ ನಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಒತ್ತು ನೀಡಬೇಕು ಎಂದು ಅವರು ಸೂಚಿಸಿದರು.
ವಿಶೇಷ ಬಸ್ ವ್ಯವಸ್ಥೆ, ಬೀಚ್ ಸ್ವಚ್ಛತೆ ಗೆ ಆಧ್ಯತೆ ನೀಡಲು ಸ್ಪೀಕರ್ ತಿಳಿಸಿದರು.
ಉಳ್ಳಾಲ ದಗಾ೯ ಅಧ್ಯಕ್ಷ ಹನೀಫ್ ಹಾಜಿ ಅವರು ಉರೂಸ್ ಕಾಯ೯ಕ್ರಮಗಳ ಮಾಹಿತಿ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಉಪವಿಭಾಗಾಧಿಕಾರಿ ಹಷ೯ವಧ೯ನ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles