ಮಂಗಳೂರು: ಕಳೆದ ನಾಲ್ಕು ದಶಕಗಳ ಕಾಲ ಸಾಮಾಜಿಕ, ಕ್ರೀಡೆ ಸೇರಿದಂತೆ ಶೈಕ್ಷಣಿಕ ಧಾರ್ಮಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೊಗವೀರಪಟ್ಣದ ಮಾರುತಿ ಜನಸೇವಾ ಸಂಘ (ರಿ.), ಮಾರುತಿ ಯುವಕ ಮಂಡಲ(ರಿ.) 39 ವರುಷಗಳನ್ನು ಪೂರೈಸಿದ್ದು, 2025ರಲ್ಲಿ ನಲ್ವತ್ತು ವರುಷವನ್ನು ವಿನೂತನ ರೀತಿಯಲ್ಲಿ ವಿವಿಧ ಸಮಾಜ ಕಾರ್ಯಗಳೊ೦ದಿಗೆ ಆಚರಿಸಲಿದೆ. ಸುಮಾರು ಮೂರು ಕೋಟಿ ರೂ ಮಿಕ್ಕಿದ 40 ಕ್ಕೂ ಹೆಚ್ಚು ಸಮಾಜ ಕಾರ್ಯಗಳನ್ನು ಜನವರಿ 2025ರಿಂದ ಡಿಸೆಂಬರ್ 2025ರವರೆಗೆ ಒಂದು ವರುಷಗಳ ಕಾಲ `ಮಾರುತಿ ಮಾಣಿಕ್ಯ ಮಹೋತ್ಸವ’ -2025ನ್ನು ಆಚರಿಸಲು ನಿರ್ಧರಿಸಿದ್ದು, ಪೆ.25ರಂದು ಮಂಗಳವಾರ ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಉಳ್ಳಾಲ ಮಾರುತಿ ಜನಸೇವಾ ಸಂಘದ ಪ್ರಧಾನ ಸಂಚಾಲಕ ಸುಧೀರ್ ವಿ. ಅಮೀನ್ ತಿಳಿಸಿದರು.
ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿನೀಡಿದ ಅವರು ಬಡಕುಟುಂಬಕ್ಕೆ ಗೋ ದಾನ ಪ್ರದಾನದ ಮೂಲಕ ಮಾರುತಿ ಮಾಣಿಕ್ಯಮಹೋತ್ಸವ – 2025ರ ವರ್ಷದ ಯೋಜನೆಗಳಿಗೆ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.) ಅಂಬಲಪಾಡಿ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ಚಾಲನೆ ನೀಡಲಿದ್ದಾರೆ. ಕರ್ನಾಟಕ ಸರಕಾರ ವಿಧಾನಸಭಾಧ್ಯಕ್ಷರಾದ. ಯು.ಟಿ. ಖಾದರ್ ಫರೀದ್ ಲಾಂಛನ ಬಿಡುಗಡೆ ಮಾಡಲಿದ್ದು, ಗೀತಾನಂದ ಫೌಂಡೇಶನ್, ಕೋಟ ಇದರ ಮುಖ್ಯಸ್ಥ ಆನಂದ್ ಸಿ. ಕುಂದರ್ ಕಾರ್ಯಕ್ರಮವನ್ಬು ಉದ್ಘಾಟಿಸಲಿದ್ದಾರೆ.ಉಳ್ಳಾಲ ಮೊಗವೀರ ಸಂಘಮಾಜಿ ಅಧ್ಯಕ್ಷರಾದ ಸದಾನಂದ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸ್ಟೇಟ್ ಅಲೈಡ್ & ಹೆಲ್ತ್ ಕೌನ್ಸಿಲ್ ಛೇರ್ಮನ್ ಯು.ಟಿ.ಇಪ್ತಿಕಾರ್ ಫರೀದ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾರುತಿ ಯುವಕ ಮಂಡಲಮಾಜಿ ಅಧ್ಯಕ್ಷ ಎಚ್.ಎಸ್. ನಿಸ್ಸಾರ್
ದ.ಕ ಮೊಗವೀರ ಮಹಾಜನ ಸಂಘ (ರಿ), ಉಚ್ಚಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್ಮತ್ಯೋದ್ಯಮಿ, ಹಾಗೂ ಮಂಗಳೂರು ತಾಂತ್ರಿಕಮೀನುಗಾರರ ಸಂಘದ ನಿರ್ದೇಶಕ ಮೋಹನ್ ಬೆಂಗ್ರೆ
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕರ್ನಾಟಕ ರಾಜ್ಯ ಇದರ ಕೋಶಾಧಿಕಾರಿ ಯತೀಶ್ ಬೈಕಂಪಾಡಿ ಮತ್ಯೋದ್ಯಮಿ ಎಸ್.ಎ.ಎಂ. ಫಿಶರೀಸ್ ನ
ಸಿಂಧೂರಾಮ್ ಎ. ಪುತ್ರನ್, ಮೊಗವೀರ ಯುವ ಸಂಘಟನೆ, ಉಡುಪಿ ಜಿಲ್ಲೆಯ ಅಧ್ಯಕ್ಷರು ಜಯಂತ್ ಅಮೀನ್ಭಾರತ್ ಪ್ರೌಢ ಶಾಲೆ ಉಳ್ಳಾಲ ನಿವೃತ್ತ ಅಧ್ಯಾಪಕ ಎಂ. ವಾಸುದೇವ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ, ಮಂಗಳೂರು, ಸಮಾಜಶಾಸ್ತ್ರ ವಿಭಾಗ,ಮುಖ್ಯಸ್ಥೆಡಾ| ಸುಮನ ಸುಧಾಕರ್ ಬೋಳಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರಧಾನ ಕಾರ್ಯದರ್ಶಿ ಕಪಿಲ್ ಎಸ್. ಬಂಗೇರ ಮಾತನಾಡಿ
ಅಂಬಲಪಾಡಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ನಾಡೋಜ ಡಾ| ಜಿ. ಶಂಕರ್, ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ , ಕೋಟ ಗೀತಾನಂದ ಪೌಂಡೇಷನ್‌ನ ಆನಂದ ಸಿ. ಕುಂದರ್ ಗೌರವ ಮಾರ್ಗದರ್ಶನದಲ್ಲಿ ವಿವಿಧ ಕ್ಷೇತ್ರದ ಗಣ್ಯರ ಗೌರವ ಸಲಹೆಯೊಂದಿಗೆ ನಾಲ್ಕು ದಶಕಗಳ ಸೇವಾಕಾರ್ಯದ ಆಚರಣೆ ಮಾರುತಿ ಮಾಣಿಕ್ಯ ಮಹೋತ್ಸವ ಸೇವೆಯಲ್ಲಿ ಧನ್ಯತೆ ಎಂಬ ಟ್ಯಾಗ್ ಲೈನ್‌ನೊಂದಿಗೆ ಆಚರಿಸಲಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿವಿಧ ಸಮಾಜ ಕಾರ್ಯಗಳನ್ನು ಆಯೋಜಿಸಿದೆ.
2025ರ ಜನವರಿಯಲ್ಲಿ ಮಾರುತಿ ಮಾಣಿಕ್ಯ ಮಹೋತ್ಸವದ ಸೇವಾ ಕಾರ್ಯಗಳನ್ಬು ಆರಂಬಿಸಿದ್ದು, ಈಗಾಗಲೇ ಬಡಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ, ಉಳ್ಳಾಲ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಶವ ಶೀತಲೀಕರಣ ನಾಲ್ಕು ಪೆಟ್ಟಿಗೆಗಳ ಕೊಡುಗೆ ಸೇರಿದಂತೆ ಕಾರ್ಯಕ್ರಮಗಳನ್ಬು ಆಯೋಜಿಸಿದ್ದು, ವೈದ್ಯಕೀಯ ಸೇವೆ, ಪರಿಸರ ಸಂಬಂಧಿ ಕಾರ್ಯಕ್ರಮಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪರಿಸರ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ, ಆಸ್ಪತ್ರೆಗಳ ಸಹಯೋಗದೊಂದಿಗೆ ರಕ್ತದಾನ, ವೈದ್ಯಕೀಯ ಶಿಬಿರವನ್ನು ದಕ್ಷಿಣ ಕನ್ನಡದಲ್ಲಿ ಆಯೋಜಿಸಿದೆ. ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಮತ್ತು ಉಡುಪಿ ಅಂಬಲಪಾಡಿಯಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ.)ನ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಮಾರುತಿ ಮಾಣಿಕ್ಯ ಮಹೋತ್ಸವ ಅಭಿಯಾನವನ್ನು ಆಯೋಜಿಸಿದ್ದು, ಡಿಸೆಂಬರ್ 2025ರಲ್ಲಿ ಸೇವಾ ಕಾರ್ಯದ ಸಮಾರೋಪದೊಂದಿಗೆ ಬೀಚ್ ಫೆಸ್ಟಿವಲ್ ಆಯೋಜನೆ ಮಾಡಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾರುತಿ ಜನಸೇವಾ ಸಂಘ ಮತ್ತು ಮಾರುತಿ ಯುವಕ ಮಂಡಲದ ಗೌರವಾಧ್ಯಕ್ಷ ವರದರಾಜ್ ಬಂಗೇರ, ಅಧ್ಯಕ್ಷ ಸಂದೀಪ್ ಪುತ್ರನ್,, ಉಪಾಧ್ಯಕ್ಷ ಪ್ರಶಾಂತ್ ಬಿ. ಉಳ್ಳಾಲ್, ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲ್ಯಾನ್ ಉಪಸ್ಥಿತರಿದ್ದರು.