ಉಪ್ಪಿನಂಗಡಿ: ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಕಳ್ಳರು ಕಳವು ಮಾಡುತ್ತಿದ್ದಾಗ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂಸ್ಥೆಯ ಸಿಬ್ಬಂದಿಗಳನ್ನು ನೋಡಿ ಕಳ್ಳರು ವಾಹನ ಮತ್ತು ಕಳವು ಮಾಡಿದ ಸ್ವತ್ತುಗಳು ಬಿಟ್ಟು ಪರಾರಿಯಾದ ಘಟನೆ ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಪೆರಿಯಶಾಂತಿ ಎಂಬಲ್ಲಿ ಮ೦ಗಳವಾರ ನಡೆದಿದೆ.
ಎಸ್ ಎಂ ಔತಾಡ್ ಫ್ರೈ. ಲಿ. ಸಂಸ್ಥೆಯು ಪೆರಿಯಶಾಂತಿಯಿಂದ ಅಡ್ಡಹೊಳೆವರೆಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕೆಲಸ ಮಾಡುತ್ತಿದ್ದು,ಡಿ.2 ರಂದು ಬೆಳಗಿನ ಜಾವ ಪೆರಿಯಶಾಂತಿಯಲ್ಲಿ ಸಂಸ್ಥೆಯು ರಸ್ತೆ ನಿರ್ಮಾಣಕ್ಕೆ ಉಪಯೋಗಿಸುವ ಸುಮಾರು 1,10,750 ರೂಪಾಯಿ ಮೌಲ್ಯದ ಸ್ಟೀಲ್ ಮತ್ತು ಸೆಂಟ್ರಿಂಗ್ ವಸ್ತುಗಳನ್ನು ಸುಮಾರು 3-4 ಮ೦ದಿ ಕಳ್ಳರು ಕಳವು ಮಾಡಿ ಪಿಕ್ ವಾಹನಕ್ಕೆ ಲೋಡ್ ಮಾಡಿ ಮಾಡುತ್ತಿದ್ದರು. ಈ ಸೊದಭ೯ದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂಸ್ಥೆಯ ಸಿಬ್ಬಂದಿಗಳನ್ನು ನೋಡಿ ಕಳ್ಳರು ವಾಹನ, ಕಳವು ಮಾಡಿದ ಸ್ವತ್ತುಗಳು, 3 ಮೊಬೈಲ್ ಫೋನ್ಗಳನ್ನು ಮತ್ತು ಮೋಟಾರು ಸೈಕಲನ್ನು ಘಟನಾ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾರೆ. ಪ್ರೊಜೆಕ್ಟ್ ಮ್ಯಾನೇಜರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.