ಮ೦ಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡೆ 28ನೇ ವಾರ್ಡಿನ ಉರ್ವ ಮಾರ್ಕೆಟ್ ಬಳಿಯ ರಿಕ್ಷಾ ಪಾರ್ಕ್ ನ ಮೇಲ್ಛಾವಣಿಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಶಾಸಕರ ವಿಶೇಷ ಅನುದಾನದಿಂದ ಅಳವಡಿಸಲಾದ ಈ ಮೇಲ್ಛಾವಣಿಯಿಂದ ಮಳೆ-ಬಿಸಿಲು ಯಾವುದನ್ನೂ ಲೆಕ್ಕಿಸದೇ ತಮ್ಮ ಕುಟುಂಬಗಳನ್ನು ಸಲಹಲು ದಿನನಿತ್ಯ ದುಡಿಯುವ ರಿಕ್ಷಾ ಚಾಲಕರುಗಳಿಗೆ ಬಿಡುವಿನ ವೇಳೆಯಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗಲಿದೆ ಎ೦ದರು. ಎಷ್ಟೇ ದುಡಿಯುವ ಒತ್ತಡದಲ್ಲಿದ್ದರೂ ಸಿಗುವ ಅಲ್ಪ ಸ್ವಲ್ಪ ಸಮಯದಲ್ಲೇ ಇರುವಲ್ಲಿಯೇ ವಿಶ್ರಾಂತಿ ಪಡೆದು ಆರೋಗ್ಯದೆಡೆಗೆ ಗಮನ ಹರಿಸುವಂತೆ ಇದೇ ವೇಳೆ ಶಾಸಕರು ರಿಕ್ಷಾ ಚಾಲಕರಿಗೆ ಕಿವಿಮಾತು ಹೇಳಿದರು.
ಮ.ನ.ಪಾ ಸದಸ್ಯರುಗಳಾದ ಗಣೇಶ್ ಕುಲಾಲ್, ಸಂಧ್ಯಾ ಆಚಾರ್ಯ, ಪೂರ್ಣಿಮಾ, ಮತ್ತು ಮೋಹನ್ ಪೂಜಾರಿ, ರಾಧಾಕೃಷ್ಣ, ಮೋಹನ್ ಆಚಾರ್, ಶೇಖರ್, ಜಿತೇಶ್, ಗಣೇಶ್ ಸಾಲ್ಯಾನ್, ಮನೋಹರ್, ಹರೀಶ್, ರಾಜೇಶ್, ಆನಂದ ರೈ, ಪ್ರೀತಮ್, ಪ್ರಕಾಶ್, ರಘುನಾಥ ಪ್ರಭು, ಗುರು ಚರಣ್, ವಿಶು ಕುಮಾರ್, ಪ್ರಜೀತ್, ಕಿಶೋರ್, ಪ್ರಸಾದ್, ಮುರಳಿ, ಸೇರಿದಂತೆ ಅನೇಕ ಉಪಸ್ಥಿತರಿದ್ದರು.