18.5 C
Karnataka
Friday, November 22, 2024

ಮಕ್ಕಳ ಮಾನಸಿಕ ದೈಹಿಕ ಬೆಳವಣಿಗೆಗೆ ಪೂರಕ ವಾತವರಣ ಅಗತ್ಯ -ಸಿಎ. ಶಾಂತಾರಾಮ ಶೆಟ್ಟಿ

ಮಂಗಳೂರು: ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸ್ಥಳೀಯವಾಗಿ ಒದಗಿಸಿ ಕೊಡ ಬೇಕಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಭಾಪತಿ ಸಿ.ಎ . ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ.
ಅವರು ಬುಧವಾರ ನಗರದ ಲಾಲ್ ಭಾಗ್ ನ ವನಿತಾ ಪಾರ್ಕ್ ನಲ್ಲಿಂದು ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕ,ದೇವಿಕಾ ಯೋಗ ತರಬೇತಿ ಕೇಂದ್ರ,ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರದ ಮತ್ತುಬಿಜೈ ಕಾಪಿಕಾಡ್ ಅಂಗನವಾಡಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಗು ಆರಂಭದಲ್ಲಿ ಮನೆಯಲ್ಲಿ ತಂದೆ ತಾಯಿ ಪೋಷಕರ ಜೊತೆ ಬೆಳೆಯುತ್ತದೆ. ಆ ಸಂದರ್ಭದಲ್ಲಿ ಅದು ಅವರ ಚಟುವಟಿಕ ಗಳನ್ನು ನೋಡಿ ತಾನು ಅನುಸರಿಸುತ್ತದೆ, ಮತ್ತು ಕಲಿಯಲು ಆರಂಭಿಸುತ್ತದೆ.ಈ ಸಂದರ್ಭದಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾದ ವಾತಾವರಣ ದೊರೆತಾಗ ಮುಂದೆ ಸಮಾಜದಲ್ಲಿ ಆ ಮಕ್ಕಳು ಉತ್ತಮ ಗುಣ ನಡತೆಯ ವ್ಯಕ್ತಿ ಗಳಾಗಿ ರೂಪು ಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಮತ್ತು ಸಮಾಜದ ಸಾಮೂಹಿಕ ಹೊಣೆಗಾರಿಕೆ ಇದೆ ಎಂದು ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ.
ದ.ಕ ರೆಡ್ ಕ್ರಾಸ್ ಘಟಕದ ಮಹಿಳಾ ವಿಭಾಗದ ನಿರ್ದೇಶಕಿ ಡಾ.ಸುಮನಾ ಮಾತ ನಾಡುತ್ತಾ,ತಾಯಿ ಮತ್ತುಮಕ್ಕಳ ಆರೋಗ್ಯ ಕ್ಕೆ ಸಂಬಂಧಿಸಿದಂತೆ ಸಮಾಜದ ಮುಖ್ಯ ಘಟಕವಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೆಡ್ ಕ್ರಾಸ್ ಘಟಕ ಹಮ್ಮಿಕೊಂಡು ಬಂದಿದೆ ಮಂದೆಯೂ ಸಹಕಾರ ನೀಡಲಿದೆ ಎಂದರು.
ಸಮಾರಂಭದಲ್ಲಿ ಭಾರತೀಯ ರೆಡ್ ಕ್ರಾಸ್ ಘಟಕದ ಹಿರಿಯ ಸಲಹೆಗಾರ ಪ್ರಭಾಕರ ಶರ್ಮಾ,ರವೀಂದ್ರ ನಾಥ ಉಚ್ಚಿಲ್ ,ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲಾ ಆಡಳಿತ ಸಮಿತಿಯ ನಿರ್ದೇಶಕ , ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ಚಲನಚಿತ್ರ ನಟ ಮೈಮ್ ರಾಮ್ ದಾಸ್,ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ದೇವಿಕಾ ಯೋಗ ತರಬೇತಿ ಕೇಂದ್ರದ ನಿರ್ದೇಶಕಿ ದೇವಿಕಾ ಪುರುಷೋತ್ತಮ,ಪತಂಜಲಿ ಯೋಗ ತರಬೇತಿ ಕೇಂದ್ರದ ಶಿಕ್ಷಕಿ ಪ್ರಭಾ ಚಂದ್ರಶೇಖರ್, ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಕಾರ್ಯ ಕರ್ತೆ ನಂದಾ ಉಪಸ್ಥಿತ ರಿದ್ದರು. ದ.ಕ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಯಾಗಿ ಭಾವಹಿಸಿದ್ದರು ದರು.ಭಾರತೀಯ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಸದಸ್ಯರಾದ ಭಾಸ್ಕರ ರೈ ಕಟ್ಟ ವಂದಿಸಿದರು,ಪುಷ್ಪರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಅನಘಾ ರಿಫೈನರಿಯ ಮಾಲಕ ಸಾಂಬಶಿವರಾವ್ ಅವರು ಅಂಗನವಾಡಿ ಮಕ್ಕಳಿಗೆ ಕೊಡುಗೆ ಯಾಗಿ ನೀಡಿದ ಊಟದ ಬಟ್ಟಲನ್ನು ಅತಿಥಿಗಳು ಮಕ್ಕಳಿಗೆ ಹಸ್ತಾಂತರಿಸಿದರು.ಚಲನಚಿತ್ರ ನಟ ಮೈಮ್ ರಾಮ್ ದಾಸ್ ಮಕ್ಕಳಿಗೆ ಹಾಡು ಮತ್ತು ನಟನೆಯ ತರಬೇತಿ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles