ಮಂಗಳೂರು:ವನಿತಾ ಪಾರ್ಕ್ ನಲ್ಲಿ ಬೆಸೆಂಟ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಮತ್ತು ನೆಲ್ಲಿಗುಡ್ಡೆ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ಶನಿವಾರ ಹಮ್ಮಿಕೊಂಡ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ ನಗರದ ಲಾಲ್ ಬಾಗ್ ಬಳಿಯ ವನಿತಾ ಪಾರ್ಕ್ ನಲ್ಲಿ ನಡೆಯಿತು.
ಇಂಡಿಯನ್ ರೆಡ್ ಕ್ರಾಸ್ ದ.ಕ ಜಿಲ್ಲಾ ಘಟಕದ ಹಿರಿಯ ಸಲಹೆಗಾರರಾದ ಪ್ರಭಾಕರ ಶರ್ಮ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಸ್ವಚ್ಚತಾ ಕಾರ್ಯ ನಮ್ಮ ಮನೆಗಳಿಂದಲೇ ಆರಂಭವಾಗಬೇಕು ಯುವ ರೆಡ್ ಕ್ರಾಸ್ ಘಟಕ ವಿದ್ಯಾರ್ಥಿ ಗಳಲ್ಲಿ ಯುವ ಜನರಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆರಂಭಗೊಂಡಿದೆ ನಮ್ಮ ಪ್ರತಿ ನಿತ್ಯದ ಸಣ್ಣ ಪುಟ್ಟ ಕೆಲಸಗಳಲ್ಲಿ ಇತರರಿಗೆ ನೆರವಾಗುವ ಮೂಲಕ ನಾವು ಸಮಾಜಿಕ ಹೊಣೆಗಾರಿಕೆ ಯನ್ನು ನಿಭಾಯಿಸಲು ಸಾಧ್ಯ ಎಂದರು.
ಇಂಡಿಯನ್ ರೆಡ್ ಕ್ರಾಸ್ ಘಟಕದ ಹಿರಿಯ ಸದಸ್ಯರಾದ ರವೀಂದ್ರನಾಥ ಉಚ್ಚಿಲ ,ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ದೀಕ್ಷಿತಾ ಹಾಗೂ ಬೆಸೆಂಟ್ ಯುವ ರೆಡ್ ಕ್ರಾಸ್ ಘಟಕದ ಸದಸ್ಯರು ಉಪಸ್ಥಿ ತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕೋಶಾಧಿಕಾರಿ ರೆಡ್ ಕ್ರಾಸ್ ಘಟಕದ ಸದಸ್ಯ ಪುಷ್ಪ ರಾಜ್ ಬಿ.ಎನ್ ವಂದಿಸಿದರು.