ಸುರತ್ಕಲ್: ವೀರ ಕೇಸರಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಸೇವಾ ಸಂಸ್ಥೆ. ಕಳೆದ 45 ವರ್ಷಗಳಿಂದ ತಡಂಬೈಲ್ ಪರಿಸರದಲ್ಲಿ ವೀರಕೇಸರಿ ಸೇವಾ ಸಂಸ್ಥೆಯು ಕ್ರೀಡೆ, ಸಾಂಸ್ಕೃತಿಕ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸಮಾಜಪರ ಕೆಲಸ ಮಾಡಿ ಶ್ಲಾಘನೆಗೆ ಪಾತ್ರವಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ನಿಕಟಪೂರ್ವ ಸದಸ್ಯ ಬಾಳ ಜಗನ್ನಾಥ ಶೆಟ್ಟಿ ತಿಳಿಸಿದರು.
ಮಾರಿಪೂಜಾ ಮಹೋತ್ಸವದ ಅಂಗವಾಗಿ ಮಾರಿಗುಡಿ ಶ್ರೀ ಮಹಮ್ಮಾಯಿ ದೇವಸ್ಥಾನದ ವಠಾರದಲ್ಲಿ ನಡೆದ ವೀರಕೇಸರಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಶಶಿಧರ ಪಡುಬಿದ್ರೆ ಮಾತನಾಡಿ ವೀರ ಕೇಸರಿ ಸಂಸ್ಥೆಯಿಂದ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆದಿರುವುದರಿಂದ ಪರಿಸರದ ನಾಗರಿಕರಿಗೆ ಅನುಕೂಲವಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು.
ಸಮಾರಂಭದಲ್ಲಿ ಉದ್ಯಮಿ ರಮೇಶ್ ರಾವ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಟ್ರಸ್ಟಿ ಸಹನಾ ರಾಜೇಶ್ ರೈ, ಸಮಾಜಸೇವಕಿ ಶಾಂತಾ, ಮಹಾಬಲ ಪೂಜಾರಿ ಕಡಂಬೋಡಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಮಾಜೀ ಅಧ್ಯಕ್ಷ ಸುಧಾಕರ ತಡಂಬೈಲ್, ಅಧ್ಯಕ್ಷ ಸುಕುಮಾರ್ ತಡಂಬೈಲ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಯಂತ ಶೆಟ್ಟಿ ತಡಂಬೈಲ್, ಸುಧಾಕರ್ ಸುರತ್ಕಲ್, ಸಹನಾ ಆರ್ ರೈ ಅವರನ್ನು ಸನ್ಮಾನಿಸಲಾಯಿತು. ಅಶೋಕ್ ಶೆಟ್ಟಿ ತಡಂಬೈಲ್ ಪ್ರಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ಶೆಟ್ಟಿ ತಡಂಬೈಲ್ ಸ್ವಾಗತಿಸಿ ವಂದಿಸಿದರು. ಮನೋಜ್ ಶೆಟ್ಟಿ ಚೇಳಾರ್ ಕಾರ್ಯಕ್ರಮ ನಿರ್ವಹಿಸಿದರು.