ಮ೦ಗಳೂರು: ವಿಧಾನ ಪರಿಷತ್ ಗೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿ೯ ಕಿಶೋರ್ ಕುಮಾರ್ ಬೊಟ್ಯಾಡಿ ಜಯ ಸಾಧಿಸಿದ್ದಾರೆ.ಕಾಂಗ್ರೆಸ್ ನ ರಾಜು ಪೂಜಾರಿ 1958 ಮತಗಳನ್ನು ಗಳಿಸಿದ್ದಾರೆ.ಕಿಶೋರ್ ಕುಮಾರ್ ಅವರು 1697 ಮತಗಳ ಅ೦ತರದಿ೦ದ ಗೆಲುವು ಸಾಧಿಸಿದ್ದಾರೆ
ಅ,೨೧ ರ೦ದು ಚುನಾವಣೆ ಜರಗಿದ್ದು ಅ.೨೪ ರ೦ದು ಮತ ಎಣಿಕೆ ನಡೆಯಿತು.ಚಲಾವಣೆಯಾದ 5907ಮತಗಳಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು 3655 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ, ಕಾಂಗ್ರೆಸ್ ನ ರಾಜು ಪೂಜಾರಿ 1958 ಮತಗಳನ್ನು ಗಳಿಸಿದರೆ, ಎಸ್ ಡಿಪಿಐ ಅಭ್ಯರ್ಥಿ ಅನ್ವರ್ ಸಾದತ್ 195 ಹಾಗೂ ದಿನಕರ್ ಉಳ್ಳಾಲ್ 9 ಮತಗಳನ್ನು ಪಡೆದರು. 90 ಮತಗಳು ತಿರಸ್ಕೃತಗೊಂಡಿವೆ.
ಚಲಾವಣೆಯಾದ ಮತಗಳು-5907
ಕಿಶೋರ್ ಕುಮಾರ್ ಪುತ್ತೂರು(ಬಿಜೆಪಿ) – 3655
ರಾಜು ಪೂಜಾರಿ ( ಕಾ೦ಗ್ರೆಸ್) – 1958
ಅನ್ವರ್ ಸಾದತ್ ( ಎಸ್ ಡಿಪಿಐ)- 195
ದಿನಕರ ಉಳ್ಳಾಲ್ -ಪತ್ಷೇತರ)- 9
ತಿರಸ್ಕೃತ – 90
ಗೆಲುವಿನ ಅಂತರ 1697