ಮ೦ಗಳೂರು: ವಿಧಾನಪರಿಷತ್ ನೈರುತ್ಯ ಕ್ಷೇತ್ರಗಳ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಪದವೀಧರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16869 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 6753 ಮತದಾರರು ಇದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಅವರು ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ವಿತರಿಸಿದರು.
ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳೆರಡಲ್ಲೂ ದ.ಕ. ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ.ಪದವೀಧರ ಕ್ಷೇತ್ರದಲ್ಲಿ 7075 ಪುರುಷರು ಮತ್ತು 9793 ಮಹಿಳೆಯರಿದ್ದಾರೆ. 1 ಲಿಂಗತ್ವ ಅಲ್ಪಸಂಖ್ಯಾತ ರಿದ್ದಾರೆ.
ಶಿಕ್ಷಕರ ಕ್ಷೇತ್ರದಲ್ಲಿ 2233 ಪುರುಷರಿದ್ದರೆ, ಅದರ ದುಪ್ಪಟ್ಟು 4520 ರಷ್ಟು ಮಹಿಳಾ ಮತದಾರರಿರುವುದು ಗಮನಾರ್ಹ.
ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 2417 ಹಕ್ಕು ಮತ್ತು ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಈ ಪೈಕಿ 2318 ಸ್ಚೀಕೃತವಾಗಿದ್ದು, 93 ತಿರಸ್ಕೃತಗೊಂಡಿವೆ.ಶಿಕ್ಷಕರ ಕ್ಷೇತ್ರದಲ್ಲಿ 1420 ಹಕ್ಕು ಮತ್ತು ಆಕ್ಷೇಪಣೆಗಳು ಸ್ವೀಕೃತವಾಗಿದ್ದು, ಈ ಪೈಕಿ 1259 ಸ್ಚೀಕೃತವಾಗಿದ್ದು, 161 ತಿರಸ್ಕೃತಗೊಂಡಿವೆ.
ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.