25.8 C
Karnataka
Thursday, March 6, 2025

ಪಕ್ಷಿಗಳಿಗೆ ನೀರಿಡುವ ಕಾರ್ಯ ಶ್ಲಾಘನೀಯ: ಪ್ರೊ. ಗಣಪತಿ ಗೌಡ

ಮಂಗಳೂರು: ಪರಿಸರ ನಾಶ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಜಾಗತಿಕ ತಾಪಮಾನ ಏರಿಕೆಯಾಗಿದೆ.ಇದು ಪ್ರಾಣಿಪಕ್ಷಿಗಳ ಅಸ್ಥಿತ್ವದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್‌ಕ್ರಾಸ್‌ ಘಟಕದ ವತಿಯಿಂದ ಪಕ್ಷಿಗಳಿಗೆ ನೀರಿಡುವ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು. ನೀರು ಎಲ್ಲರ ಅಗತ್ಯಗಳಲ್ಲಿ ಒಂದಾಗಿದೆ. ಮನುಷ್ಯನಾದರೆ ನೀರಿರುವ ಕಡೆಹುಡುಕಿಕೊಂಡು ಹೋಗಿ ಅದನ್ನು ಪಡೆಯುತ್ತಾನೆ. ಆದರೆ ಪಕ್ಷಿಗಳ ಸ್ಥಿತಿ ಬಹಳ ಕಷ್ಟವಾಗುತ್ತಿರುವ ಈ ಹೊತ್ತಿನಲ್ಲಿಪಕ್ಷಿಗಳಿಗೆ ನೀರಿಡುವ ಪದ್ಧತಿ ಉತ್ತಮವಾದುದು. ಯುವ ರೆಡ್‌ಕ್ರಾಸ್ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದುಶ್ಲಾಘನೀಯ ಎಂದರು.
ಯುವ ರೆಡ್‌ಕ್ರಾಸ್‌ನ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್, ಪ್ರಕೃತಿ ಆರಾಧಕರಾದ ನಾವು ಪರಿಸರ ರಕ್ಷಣೆಯ ಗುರುತರ ಜವಾಬ್ದಾರಿ ಹೊಂದಿದ್ದೇವೆ. ಜಾಗತಿಕ ತಾಪಮಾನದಿಂದ ಸಂಕಷ್ಟಕೊಳ್ಳಗಾಗಿರುವ ಪಕ್ಷಿಸಂಕುಲಕ್ಕೆ ನೀರುಒದಗಿಸುವ ಮೂಲಕ ಅಳಿಲು ಸೇವೆ ಮಾಡುವ ಸಲುವಾಗಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ ಎಂದುಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ವಿದ್ಯಾರ್ಥಿ ಮಣಿಕಂಠ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles