26.6 C
Karnataka
Friday, April 4, 2025

ಹಳೆ ಮನೆ ಕೆಡವುತ್ತಿದ್ದಾಗ ಗೋಡೆ ಕುಸಿದು ಮನೆಯ ಮಾಲಕ ಸಹಿತ ಇಬ್ಬರ ಸಾವು

ಮಂಗಳೂರು: ಹಳೆ ಮನೆಯನ್ನು ಕೆಡವುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ನಗರದ ಜೈಲು‌ ರಸ್ತೆಯ ಬಳಿ ಗುರುವಾರ ಬೆಳಗ್ಗೆ ನಡೆದಿದೆ.


ಮನೆಯ ಮಾಲಕ ಜೇಮ್ಸ್ ಜತ್ತನ್ನ (೫೬) ಹಾಗೂ ಸೋದರ ಸಂಬಂಧಿ ಎಡ್ವಿನ್ ಜೆರಾಲ್ಡ್‌ ಮೊಬಿನ್‌(೫೪) ಮೃತ ಮೃತಪಟ್ಟವರು. ಗುರುವಾರ ಬೆಳಗ್ಗೆ ಜೆಸಿಬಿ ಮೂಲಕ ಮನೆ ಕೆಡವುತ್ತಿದ್ದಾಗ ಕಾಂಕ್ರೀಟ್ ಲಿಂಟೆಲ್ ಸಹಿತ ಗೋಡೆ ಮೈಮೇಲೆ ಬಿದ್ದಿದೆ. ಗ೦ಭೀರ ಗಾಯಗೊ೦ಡ ಅವರನ್ನು ಅಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮೃತಪಟ್ಟಿದ್ದಾರೆ. ಜೇಮ್ಸ್ ಅವರು ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಿಸುವ ಉದ್ದೇಶದಿಂದ ಬಹರೈನ್ ನಿಂದ ಬಂದಿದ್ದರು. ಎಡ್ವಿನ್ ಪಕ್ಕದ ಮನೆಯವರಾಗಿದ್ದು ಸೋದರ ಸಂಬಂಧಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles