ಮ೦ಗಳೂರು: ಕಾಡಾನೆ ದಾಳಿಯಿ೦ದ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಮಹಿಳೆ ಮೃತಪಟ್ಟ ಘಟನೆ ಪುತ್ತೂರು ಕೊಳ್ತಿಗೆ ಗ್ರಾಮದ ಹರ್ತ್ಯಡ್ಕ ಎಂಬಲ್ಲಿ ಮ೦ಗಳವಾರ ಬೆಳಿಗ್ಗೆ ಸ೦ಭವಿಸಿದೆ. ಸೆಲ್ಲಮ್ಮ (65) ಮೃತಪಟ್ಟ ಮಹಿಳೆ.
ಸೆಲ್ಲಮ್ಮ ಕೊಳ್ತಿಗೆ ಗ್ರಾಮದ ಕನಿಯಾರು ಸಿ ಆರ್ ಸಿ ಕಾಲೋನಿಯಲ್ಲಿ ಒಬ್ಬರೇ ವಾಸವಾಗಿದ್ದು, ಕೆ ಎಫ್ ಡಿ ಸಿ ಯ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಮ೦ಗಳವಾರ ಬೆಳಿಗ್ಗೆ 7 ರಿಂದ 8ಗಂಟೆಯ ಅವಧಿಯಲ್ಲಿ ಪುತ್ತೂರು ಕೊಳ್ತಿಗೆ ಗ್ರಾಮದ ಹರ್ತ್ಯಡ್ಕ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದಾಗ ಕಾಡಾನೆಯೊಂದು ಸೆಲ್ಲಮ್ಮ ಅವರ ಮೇಲೆ ದಾಳಿ ಮಾಡಿ ಓಡಿಸಿಕೊಂಡು ಹೋಗಿ ತುಳಿದು ಗಂಭೀರವಾಗಿ ಗಾಯಗೊಳಿಸಿದೆ. ಪರಿಣಾಮ ಸೆಲ್ಲಮ್ಮರವರು ಸ್ಥಳದಲ್ಲೇ ಮೃತಪಟ್ಟಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು, ಕೆ ಎಫ್ ಡಿ ಸಿ ಅಧಿಕಾರಿಗಳು, ಸುಳ್ಯ ವೃತ್ತ ನಿರೀಕ್ಷಕರು ಹಾಗೂ ಬೆಳ್ಳಾರೆ ಠಾಣಾ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.
