25.4 C
Karnataka
Thursday, November 21, 2024

ಆಂತರಿಕ ದೂರು ಸಮಿತಿ ರಚನೆಗೆ ಸೂಚನೆ

ಮಂಗಳೂರು: ಸುಪ್ರೀಂ ಕೋರ್ಟ್ ವಿಶಾಖಾ ಮಾರ್ಗಸೂಚಿಯಂತೆ “ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ-2013” ರನ್ವಯ ಸರ್ಕಾರಿ, ಖಾಸಗಿ, ನಿಗಮ ಮಂಡಳಿ, ಸಾರ್ವಜನಿಕ ಉದ್ಯಮಗಳು, ಫ್ಯಾಕ್ಟರಿಗಳು ಇತ್ಯಾದಿ 10 ಅಥವಾ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿರುವ ಸ್ಥಳಗಳಲ್ಲಿ “ಆಂತರಿಕ ದೂರು ಸಮಿತಿ”ಯನ್ನು ರಚನೆ ಮಾಡುವುದು ಕಡ್ಡಾಯವಾಗಿರುತ್ತದೆ.
ಇದಕ್ಕೆ ಸಂಬಂಧಿಸಿದ ಆದೇಶವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ವೆಬ್‍ಸೈಟ್: kscw.kar.nic.inಡೌನ್ ಲೋಡ್ ಮಾಡಿಕೊಳ್ಳಬಹುದು.ಮಾಲೀಕರು ಅಥವಾ ಉದ್ಯೋಗದಾತರು ಮೇಲ್ಕಂಡ ಕರ್ತವ್ಯಗಳನ್ನು ನಿರ್ವಹಿಸಲು ತಪ್ಪಿದಲ್ಲಿ ರೂ.50,000 ಗಳವರೆಗೆ ದಂಡ ನೀಡಬೇಕಾಗುತ್ತದೆ ಮತ್ತು ಇಂತಹ ಕಾರ್ಯಗಳು ಪುನರಾವರ್ತನೆಯಾದಲ್ಲಿ ಪ್ರತಿ ಬಾರಿಯು ಕರ್ತವ್ಯ ಉಲ್ಲಂಘನೆಗಾಗಿ ಹಣದ ಎರಡರಷ್ಟು ದಂಡ ನೀಡಬೇಕಾಗುತ್ತದೆ.
10 ಅಥವಾ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿರುವ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಮಾಡಿರುವ ಕುರಿತು ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಕಚೇರಿಗಳು, ಉದ್ದಿಮೆಗಳು, ನಿಗಮ ಮಂಡಳಿ, ಸಾರ್ವಜನಿಕ ಉದ್ಯಮಗಳು, ಫ್ಯ್ಯಾಕ್ಟರಿಗಳು ತಮಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಇಲಾಖೆಗೆ ಮಾಹಿತಿಯನ್ನು ಸಲ್ಲಿಸಬೇಕು. 10 ಕ್ಕಿಂತ ಕಡಿಮೆ ಸಿಬ್ಬಂದಿಗಳಿದ್ದಲ್ಲಿ ಕೂಡ ಕಡ್ಡಾಯವಾಗಿ ಮಾಹಿತಿಯನ್ನು ಸಲ್ಲಿಸಬೇಕು. ಕೆಲಸದ ಸ್ಥಳಗಳಲ್ಲಿ ಪಾರದರ್ಶಕವಾದ “ದೂರು ಪೆಟ್ಟಿಗೆ”ಯನ್ನು ಕಡ್ಡಾಯವಾಗಿ ಅಳವಡಿಸಬೇಕು.
10 ಕ್ಕಿಂತ ಕಡಿಮೆ ಸಿಬ್ಬಂದಿಗಳು ಇರುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಂತಹ ಘಟನೆ ಸಂಭವಿಸಿದಲ್ಲಿ ದೂರನ್ನು ಜಿಲ್ಲಾ ಮಟ್ಟದ “ಸ್ಥಳಿಯ ದೂರು ಸಮಿತಿ”ಗೆ ನೀಡಬೇಕು.
ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀಶಕ್ತಿ ಭವನ, 2ನೇ ಮಹಡಿ, ಮೆಸ್ಕಾಂ ಭವನ ಹತ್ತಿರ ಲಾಲ್‍ಬಾಗ್ ಮಂಗಳೂರು-575004, ದೂರವಾಣಿ: 0824-2451254 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles