ಮ೦ಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚಣೆಯ ಹಿನ್ನಲೆಯಲ್ಲಿ ಮಂಗಳೂರಿನ ಲೆಡಿಗೋಷನ್ ಆಸ್ಪತ್ರೆ ಯಲ್ಲಿ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.
ಲೇಡಿಗೋಷನ್ ಆಸ್ಪತ್ರೆಯ ಸಹಯೋಗದೊಂದಿಗೆ ತುಳುನಾಡ ತುಳುವೆರ್ ಸಂಘಟನೆ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಆರೋಗ್ಯಕರ ತಾಯಿಯಿಂದ ಆರೋಗ್ಯಕರ ಮಗು ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುನಾಡ ತುಳುವೆರ್ ವತಿಯಿಂದ ನೀಡಲಾದ ಮಕ್ಕಳ ಆರೈಕೆಯ ವಸ್ತುಗಳನ್ನು ಬಾಣಂತಿ ಮಹಿಳೆಯರಿಗೆ ವಿತರಿಸಲಾಯಿತು.. ತುಳುನಾಡ ತುಳುವೆರ್ ಸಂಘಟನೆಯ ಆಕಾಶ್ ಕರ್ಕೇರ ಹಾಗೂ ಸಂಘಟನೆಯ ಅಧ್ಯಕ್ಷೆ ಸಂಧ್ಯಾ ಅವರನ್ನು ಲೇಡಿಗೋಷನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಧುರ್ಗಾಪ್ರಸಾದ್ ಅವರು ಅಭಿನಂದಿಸಿದು. ಈ ವೇಳೆ ಯೋಗ ಶಿಕ್ಷಕಿ, ಲಿಟ್ಲ್ ಫ್ಲರ್ ಶಾಲೆಯ ಸಂಚಾಲಕಿ ರೇಷ್ಮಾ ಆರ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ದೆ. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಇಂಡಿಯನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಂಗಳೂರು ಇದರ ನಿರ್ದೇಶಕ ಮುರಳಿ ಹೊಸಮಜಲು ಅವರು ಉಪಸ್ಥಿತರಿದ್ದರು.