ಮ೦ಗಳೂರು: “ಗ್ರಾಹಕರು ಖರೀದಿಸುವಾಗ ಯಾವುದೇ ವಂಚನೆಗೆ ಒಳಗಾಗಬಾರದು ಹಾಗೂ ತಮ್ಮ ಹಕ್ಕುಗಳ ಬಗೆಗೆ ಸರಿಯಾಗಿ ತಿಳಿದಿರಬೇಕು ಎ೦ದು” ಮಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ
ಕೆ .ಪೃಥ್ವಿರಾಜ್ ರೈ ,ಹೇಳಿದರು .
ಪಿ.ಎ ಪ್ರಥಮ ದರ್ಜೆ ಕಾಲೇಜುಹಾಗೂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಸಹಯೋಗದಲ್ಲಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ನಡೆದ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಕಾಯ೯ಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಡಾ.ಅಬೂಬಕ್ಕರ್ ಸಿದ್ಧಿಕ್ ಪ್ರಸ್ತಾವನೆಗೈದರು. ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷತೆ ವಹಿಸಿದ್ದರು. ಡಾ.ಜಯವಂತ ನಾಯಕ್ . ಶರಫುದ್ದೀನ್ ಪಿ.ಕೆ, ಡಾ.ಸಯ್ಯದ್ ಅಮೀನ್ ಅಹ್ಮದ್, ಡಾ.ಜಿ
ಹರಿಕೃಷ್ಣನ್, ವಾಣಿಶ್ರೀ ವೈ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹಿಬಾ ಮರ್ಯಂ ಕಾರ್ಯಕ್ರಮ ನಿರೂಪಿಸಿದರು. ಫರ್ಹಾನ್ ಸ್ವಾಗತಿಸಿದರು., ತಶ್ಮೀಯಾ ವಂದಿಸಿದರು.
