19.9 C
Karnataka
Saturday, November 16, 2024

ವಿಶ್ವ ವಿಕಲಚೇತನ ದಿನಾಚರಣೆ

ಮಂಗಳೂರು:ವಿಕಲಚೇತನರ ವಿಶೇಷವಾದ ಸಾಮಥ್ಯ೯ವಿದೆ.ಅವರಲ್ಲಿ ಆತ್ಮಸ್ಥರ್ಯವನ್ನು ಹೆಚ್ಚಿಸಿ ಪ್ರೋತ್ಸಾಹಿಸಬೇಕು ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದರು.
ಅವರು ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ವಿಶ್ವ ವಿಕಲಚೇತನ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿಕಲಚೇತನ ಮಕ್ಕಳನ್ನು ಪ್ರೀತಿ ಅಕ್ಕರೆಯಿಂದ ನೋಡಿಕೊಳ್ಳುವ ಪೋಷಕರು, ಶಿಕ್ಷಕರು ಹಾಗೂ ಆಶ್ರಯ ಶಾಲೆಯ ಸಂಸ್ಥೆಗಳ ಸೇವೆ ಶ್ಲಾಘನೀಯ. ಕೆಲವು ಮಕ್ಕಳು ಹುಟ್ಟುವಾಗಲೇ ಅಂಗವೈಕಲ್ಯವನ್ನು ಹೊಂದಿರುತ್ತಾರೆ ಇಂತಹ ಮಕ್ಕಳಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ ಹಾಗಾಗಿ ಸಮಾಜದ ಮುಖ್ಯ ವಾಹಿನಿಗೆ ಅವರನ್ನು ತರುವುದು ನಮ್ಮ ಕರ್ತವ್ಯ. ಮಾನವನ ದೇಹದಲ್ಲಿ ಅನೇಕ ನ್ಯೂನ್ಯತೆಗಳನ್ನು ದೇವರು ನೀಡಿದ್ದಾನೆ ಇದನ್ನು ಪ್ರಸಾದವೆಂದು ಭಾವಿಸಿ ಅಂತ ಮಕ್ಕಳಿಗೆ ಧೈರ್ಯವನ್ನು ತುಂಬಿ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಬೇಕು ಎಂದು ಹೇಳಿದರು.
1992ರಲ್ಲಿ ವಿಶ್ವದಾದ್ಯಂತ ವಿಶ್ವ ವಿಕಲಚೇತನ ದಿನಾಚರಣೆ ಜಾರಿಗೆ ಬಂದಿದೆ. ಇಂತಹ ವಿಶೇಷ ಮಕ್ಕಳಿಗೆ ಉಚಿತ ಕಾನೂನು ನೆರವು ಜಾರಿಯಲ್ಲಿದ್ದು, ಯಾವುದೇ ತೊಂದರೆಗಳು ಎದುರಾದರೆ ಅವರ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಶೇಷ ಕಾನೂನು ವ್ಯವಸ್ಥೆ ಮುಖ್ಯ ಪಾತ್ರ ವಹಿಸುವುದು ಎಂದು ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸದಸ್ಯ ಕಾರ್ಯದರ್ಶಿ ಶೋಭಾ ಜಿ. ಅವರು ಹೇಳಿದರು.
ವೇದಿಕೆಯಲ್ಲಿ ಪದ್ಮಭೂಷಣ ಪುರಸ್ಕøತ ಹರೇಕಳ ಹಾಜಬ್ಬ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ., ಮಹಾನಗರಪಾಲಿಕೆ ಕಾಪೆರ್Çರೇಟರ್ ಜಗದೀಶ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಚೈತನ್ಯ ವಿವಿಧೋದ್ದೇಶ ಸಂಘ ಹಾಗೂ ಅಂಗಾಂಗ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಡಾ. ಮುರಳಿಧರ ನಾಯಕ್, ಅಂಗವಿಕಲ ಫೆಡರೇಶನ್ ಅಧ್ಯಕ್ಷ ಬಿ.ವಿ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಶೇಷ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿ ಶ್ರೀಲತಾ ಸ್ವಾಗತಿಸಿದರು. ಶಕ್ತಿನಗರದ ಸಾನಿಧ್ಯ ವಿಶೇಷ ಶಾಲೆ ಆಡಳಿತ ಅಧಿಕಾರಿ ಡಾ.ವಸಂತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಂತರ ವಿಶೇಷ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles