ಮಂಗಳೂರು: ಪಶು ವ್ಯೆದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವÀವಿದ್ಯಾಲಯ, ಬೀದರ್, ಭಾ.ಕೃ.ಅ.ಪ -ಕೃಷಿ ವಿಜ್ಞಾನÀ ಕೇಂದ್ರ (ದ.ಕ) ಮಂಗಳೂರು ಹಾಗೂ ಕರ್ನಾಟಕ ಸರ್ಕಾರ -ಕೃಷಿ ಇಲಾಖೆ, ದಕ್ಷಿಣಕನ್ನಡ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಣ್ಣಿನ ದಿನಾಚರಣೆ ಕಾರ್ಯಕ್ರಮ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬೀದರ್‍ನ ಕ.ಪ.ಪ.ಮೀ.ವಿ ವಿಶ್ವÀವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಎಸ್.ಆರ್. ಸೋಮಶೇಖರ ಉದ್ಘಾಟಿಸಿದರು. ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕರಾದ ಕುಮುದಾ ಸಿ.ಎನ್. ಪ್ರಾಸ್ತವಿಕ ಮಾತನಾಡಿದರು.ದ.ಕ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಟಿ.ಜೆ. ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಣ್ಣಿನ ಆರೈಕೆ: ಮಾಪನ, ಮೇಲ್ವಿಚಾರಣೆ, ನಿರ್ವಹಣೆ” ಎಂಬ ಧ್ಯೇಯದೊಂದಿಗೆ ಕಾರ್ಯಕ್ರಮ ಆಚರಿಸಲಾಯಿತು. ಫಲಾನುಭವಿ ರ್ಯೆತರಿಗೆ ಅತಿಥಿಗಳಿಂದ ಮಣ್ಣಿನ ಆರೋಗ್ಯ ಚೀಟಿ ವಿತರಿಸಲಾಯಿತು. ಮಂಗಳೂರು ವಿಜ್ಞಾನ ಕೇಂದ್ರ, ಮಣ್ಣು ವಿಜ್ಞಾನಿ, ಡಾ.ಮಲ್ಲಿಕಾರ್ಜುನ.ಎಲ್, ಮಣ್ಣಿನ ಆರ್ಯೆಕೆ: ಮಾಪನ, ಮೇಲ್ವಿಚಾರಣೆ, ನಿರ್ವಹಣೆಯ ಕುರಿತು ರ್ಯೆತರಿಗೆ ಮಾಹಿತಿ ನೀಡಿದರು.