ಮಂಗಳೂರು: ವಿಶುಕುಮಾರ್ ದತ್ತಿನಿಧಿ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ(ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ನ.26ರ ಆದಿತ್ಯವಾರ ಮಂಗಳೂರು ಪುರಭವನದಲ್ಲಿ ವಿಶುಕುಮಾರ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕಾರ್ಯಕ್ರಮ ಜರಗಲಿದೆ ಎ೦ದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭ ಮಾತ್ರವಲ್ಲದೆ, ಕನ್ನಡ ರಾಜ್ಯೋತ್ಸವ ವಿಶುಕುಮಾರ್ ಸಾಹಿತ್ಯೋತ್ಸವ ಎನ್ನುವ ಒಂದು ದಿನ ಪೂರ್ತಿ ನಡೆಯುವ ಕಾರ್ಯಕ್ರಮವನ್ನು ಸಂಯೋಜಿಸಿದೆ. ಇದು ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ ನಡೆಯುತ್ತಿದೆ. ಪುಸ್ತಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಶಿವರಾಜ್ ತಂಗಡಗಿ ವಿಶುಕುಮಾರ್ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ಶಾಸಕರಾದ ವೇದವ್ಯಾಸ್ ಕಾಮತ್, ಡಾ.ವೈ ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎ೦ದರು.
ಅಪರಾಹ್ನ 3 ಗಂಟೆಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಬಾರಿ ಪ್ರಶಸ್ತಿಯನ್ನು ಸಿನಿಮಾಕ್ಷೇತ್ರಕ್ಕೆ ಮೀಸಲಿರಿಸಿದ್ದು, ಸಿನಿಮಾ ಕ್ಷೇತ್ರದ ಅಪ್ರತಿಮ ಸಾಧಕ, ಈ ನಾಡುಕಂಡ ಸೇವಾ ಸೇನಾನಿ, ಕರ್ನಾಟಕ ರತ್ನ
ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ವಿಶುಕುಮಾರ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.ಪ್ರಶಸ್ತಿಯನ್ನು ಡಾ.ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸ್ವೀಕರಿಸಲಿದ್ದು,ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕನ್ನಡ ಪ್ರಭ ದೈನಿಕದಪುರವಣಿ ಪ್ರಧಾನ ಸಂಪಾದಕರಾದ ಗಿರೀಶ್ ರಾವ್ ಹತ್ವಾರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಧ್ಯಮ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಸದಾಶಿವ ಶೆಣೈ ಅವರು ಅಭಿನಂದನಾ ಭಾಷಣಮಾಡಲಿದ್ದಾರೆ. ವಿಶುಕುಮಾರ್ ಅವರ ಪತ್ನಿ ನ್ಯಾಯವಾದಿ ವಿಜಯಲಕ್ಷ್ಮೀ ವಿಶುಕುಮಾರ್ ಹಾಗೂ ಸಿನಿಮಾ, ನಾಟಕ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸುಪ್ರಿತಾ ಚರನ್ ಪಾಲಪ್ಪ ಇವರಿಗೆಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎ೦ದು ವಿವರಿಸಿದರು.
ಕರ್ನಾಟಕ ರಾಜ್ಯಾದ್ಯಂತ 33 ಘಟಕಗಳನ್ನು ಹೊಂದಿರುವ, ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶದ ಅಡಿಯಲ್ಲಿ ವಿದ್ಯೆಉದ್ಯೋಗ ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯದೊಂದಿಗೆ ಸಾಮಾಜಿಕ ಚಿಂತನೆಯಿಂದ ಕೆಲಸ ಮಾಡುತ್ತಿರುವಯುವವಾಹಿನಿ ಸಂಸ್ಥೆಯು ತನ್ನ ಐದು ದಶಕದ ಜೀವನದಲ್ಲಿ 11 ಕಾದಂಬರಿಯನ್ನು, 9 ನಾಟಕವನ್ನು, 100 ಕ್ಕೂ ಅಧಿಕ ಕಥೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ, ರಾಷ್ಟ್ರ ಪ್ರಶಸ್ತಿ ಪಡೆದ ಕೋಟಿಚೆನ್ನಯ ಕಪ್ಪುಬಿಳುಪು ಸಿನಿಮಾ ಸಹಿತ ಮೂರು ಸಿನಿಮಾವನ್ನು ನಿರ್ದೇಶಿಸಿ ತನ್ನ ಬದುಕಿನ ಅಲ್ಪಾವಧಿಯಲ್ಲೇ ಮರೆಯಾದ ವಿಶುಕುಮಾರ್ ಅವರ ಸಂಸ್ಕರಣೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿ, ವಿಶುಕುಮಾರ್ ದತ್ತಿನಿಧಿ ಸ್ಥಾಪಿಸಿ ಆಮೂಲಕ ಅಮೂಲಕ ಸಮಾಜದ ಅಗ್ರಮಾನ್ಯ ಸಾಹಿತಿಗಳಿಗೆ, ಸಾಧಕರಿಗೆ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿರುತ್ತದೆ ಎ೦ದರು.
ಪತ್ರಿಕಾಗೋಷ್ಠಿಯಲ್ಲಿಯುವವಾಹಿನಿ ಕೇಂದ್ರ ಸಮಿತಿ ಉಪಾಧ್ಯಕ್ಷ ಹರೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕುಸಮಾಕರ್ ಕುಂಪಲ, ಸಂಚಾಲಕ ಭಾಸ್ಕರ್ ಕೋಟ್ಯಾನ್ ಕೂಳೂರು, ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ನಿರ್ದೇಶಕರು, ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷೆ ಮೋಹಿನಿ, ಕೋಶಾಧಿಕಾರಿ ಶ್ರವಣ್ ಕುಮಾರ್, ನರೇಶ್ ಸಸಿಹಿತ್ಲು ,ಶ೦ಕರ ಸುವಣ೯ಮತ್ತಿತರರು ಉಪಸ್ಥಿತರಿದ್ದರು.