26.6 C
Karnataka
Thursday, November 21, 2024

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕೆಲಸದಾಳು ಸಾವು

ಉಪ್ಪಿನಂಗಡಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದಸಗುಣ ಎಂಬವರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ ಸೋಮವಾರ ಸ೦ಭವಿಸಿದೆ.

ಕರಾಯ ಗ್ರಾಮದನಿವಾಸಿ ಅಂಗಾರು ಹಾಗೂ ಅವರ ಗಂಡ ಸಗುಣ ಎಂಬವರು ಸೋಮವಾರ ಮದ್ಯಾಹ್ನ ಸಮಯ ಇಳಂತಿಲ ಗ್ರಾಮದ ಪೆದಮಲೆ ಎಂಬಲ್ಲಿ, ಜಯಂತ ಕುಮಾರ್ ಎಂಬವರ ಮನೆಗೆ ಕೆಲಸಕ್ಕೆ ಬಂದು ಮನೆಯ ಸಮೀಪ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪೊದೆಗಳ ನಡುವೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯೊಂದು ಸಗುಣ ಅವರಿಗೆ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟರು.
ವಿದ್ಯುತ್ ತಂತಿಯ ಬಗ್ಗೆ ನಿರ್ಲಕ್ಷವಹಿಸಿರುವ ಮೆಸ್ಕಾ೦ ಇಲಾಖೆ ಹಾಗೂ ಅಂಗಾರು ಹಾಗೂ ಸಗುಣರವರನ್ನು ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಯಿರುವ ಸ್ಥಳದಲ್ಲಿ ಕೆಲಸಕ್ಕೆ ನೇಮಿಸಿ ಕೆಲಸ ಮಾಡಿಸಿರುವ ಬಗ್ಗೆ ಜಯಂತ ಕುಮಾರ್ ರವರ ವಿರುದ್ದ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ..

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles