24.5 C
Karnataka
Thursday, April 30, 2026

ಅಶಕ್ತ ಮಕ್ಕಳಿಗೆ ನೆರವು ಪುಣ್ಯದ ಕಾರ್ಯ: ಶಾಸಕ ಡಿ.ವೇದವ್ಯಾಸ ಕಾಮತ್

ಮಂಗಳೂರು : ಅಶಕ್ತ ಹಾಗೂ ಬಡ ಮಕ್ಕಳಿಗೆ ನೆರವಾಗುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ. ರಾಷ್ಟ್ರೀಯವಾದಿ ಕ್ರೈಸ್ತ ರ ವೇದಿಕೆ ಇಂತಹ ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ಪ್ರೇರಣಾದಾಯಿಯಾಗಿದೆ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ರಾಷ್ಟ್ರೀಯವಾದಿ ಕ್ರೈಸ್ತ ರ ವೇದಿಕೆಯ ವತಿಯಿಂದ ಕೊರ್ಡೆಲ್ ಕ್ರಿಕೆಟರ್ಸ್ ಕುಲಶೇಖರ ಸಹಯೋಗದಲ್ಲಿ ಗುಡ್ ಫ್ರೈಡೇ ಯ ಸಾಮಾಜಿಕ ಸೇವಾ ಚಟುವಟಿಕೆಯ ಅಂಗವಾಗಿ ಶುಕ್ರವಾರ ನಗರದ ವೆನ್ಲಾಕ್ ಅಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಹಣ್ಣು ಹಂಪಲು, ಪುಸ್ತಕ ಹಾಗೂ ಇತರ ಅವಶ್ಯ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಥನಿ ಕನ್ಯಾ ಮಠದ ಭಗಿನಿ ಶುಭಾ ಪ್ರಾರ್ಥನಾ ವಿಧಿ ನೆರವೇರಿಸಿ ಆಶೀರ್ವಚನ ನೀಡಿದರು. ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್, ಸೈಂಟ್ ತೆರೆಸಾ ಶಾಲೆಯ ಉಪ ಪ್ರಾಂಶುಪಾಲೆ ಸಿ.ವಿದ್ಯಾ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಮಾಜಿ ಕಾರ್ಪೋರೇಟರ್ ಪದ್ಮನಾಭ ಅಮೀನ್, ಉದ್ಯಮಿ ಸಿಂಥಿಯಾ ಮೊರಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಮುಖರಾದ ಅರುಣ್ ಡಿಸೋಜಾ ಉರ್ವ, ಜೂಲಿಯೆಟ್ ಡಿಕುನ್ಹಾ ಉರ್ವಸ್ಟೋರ್, ಪ್ರೀಮಾ ಫೆರ್ನಾಂಡಿಸ್ ಎಕ್ಕೂರು, ಜೂಲಿಯನಾ ಮೊರಾಸ್, ಆಗ್ನೆಸ್ ರೆಬೆಲ್ಲೊ ಮುಂಬೈ, ರಿಯೋ ಮಿನೇಜಸ್, ಓಸ್ವಾಲ್ಡ್ ಡಿಕುನ್ಹ ಬಿಜೈ, ಮಧು ಬಿಜೈ ಕೊರ್ಡೆಲ್ ಕ್ರಿಕೆಟರ್ಸ್ ನ ನವೀನ್ ಫೆರ್ನಾಂಡಿಸ್, ಪ್ರವೀಣ್ ಫೆರ್ನಾಂಡಿಸ್, ಜೊನ್ಸಿ ರೇಗೊ, ಫಿಲಿಪ್ ಡಿಸೋಜ, ಸಂದೀಪ್ ಡಿಸೋಜ, ರೊನಾಲ್ಡ್ ಕೊರ್ಡೆಲ್ ಮತ್ತು ರಾಬರ್ಟ್ ಕೊರ್ಡೆಲ್ ಉಪಸ್ಥಿತರಿದ್ದರು.
ರಾಷ್ಟ್ರೀಯವಾದಿ ಕ್ರೈಸ್ತ ರ ವೇದಿಕೆಯ ಸ್ಥಾಪಕ ಸಂಚಾಲಕ ಫ್ರ್ಯಾಂಕ್ಲಿನ್ ಮೊಂತೆರೊ ಸ್ವಾಗತಿಸಿ, ವಂದಿಸಿದರು. ವೇದಿಕೆಯ ಮಹಿಳಾ ಪ್ರಮುಖ್ ಪ್ರೀತಿ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles