22.1 C
Karnataka
Saturday, July 25, 2026

ಎಂಸಿಸಿ ಬ್ಯಾಂಕ್‌ನ ಮಾರ್ಗನ್ಸ್‌ಗೇಟ್ ಶಾಖೆ ನೂತನ ಕಟ್ಟಡಕ್ಕೆ ಸ್ಥಳಾಂತರ

ಮ೦ಗಳೂರು: ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ಎಂಸಿಸಿ ಬ್ಯಾಂಕ್‌ನ ಮಾರ್ಗನ್ಸ್‌ಗೇಟ್ ಶಾಖೆಯನ್ನು ಜುಲೈ 25ರಂದು ಮಂಗಳೂರಿನ ಮಾರ್ನಮಿಕಟ್ಟೆ ರಸ್ತೆಯಲ್ಲಿರುವ ಎಚ್.ಎಚ್. ಡೈಮಂಡ್ ಸಿಟಿ ಕಟ್ಟಡದ ನೆಲ
ಮಹಡಿಯಲ್ಲಿ ಇರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಶಾಖೆಯು 31 ವರ್ಷಗಳ ಯಶಸ್ವಿ ಸೇವೆಯನ್ನು ಪೂರ್ಣಗೊಳಿಸಿದ ಸಂಭ್ರಮವನ್ನು ಸಹ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು.ನೂತನ ಶಾಖಾ ಕಛೇರಿಯನ್ನು ಕಾಸ್ಸಿಯಾದ ಸಂತ ರೀಟಾ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾ|
ರಿತೇಶ್ ರೋಡ್ರಿಗಸ್ ಆಶೀರ್ವದಿಸಿದರು. ಭದ್ರತಾ ಕೊಠಡಿಯನ್ನು ಎಂಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕರು ಹಾಗೂ ಮಾಜಿ ಕಾರ್ಪೊರೇಟರ್ ಜೇಮ್ಸ್ ವಿಕ್ಟರ್ ಡಿಮೆಲ್ಲೊ, ಉದ್ಘಾಟಿಸಿದರು. ಸಮಾಜಸೇವಕ, ನಾಟಕಕಾರ, ನಿರ್ದೇಶಕ ಹಾಗೂ ನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಹಾಗೂ ಹೆಲ್ತ್ಮಾರ್ಟ್‌ನ ಮಾಲಕರಾದ ಕೃಷ್ಣ ಬಿಂದುಮನೆ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.
ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು, ನಿರ್ದೇಶಕರು,ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಹಾಗೂ ಹಿತೈಷಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಎಂಸಿಸಿ ಬ್ಯಾಂಕ್
ನಿಜಾರ್ಥದಲ್ಲಿ ಜನರ ಬ್ಯಾಂಕ್ ಎಂದು ಬಣ್ಣಿಸಿದ ಅವರು, ಭಾರತದ ಸ್ವಾತಂತ್ರ್ಯಕ್ಕೂ ಮುನ್ನವೇ ಸ್ಥಾಪನೆಯಾದ ಈ ಬ್ಯಾಂಕ್ ದೀರ್ಘಕಾಲದ ವಿಶ್ವಾಸ, ಸೇವೆ ಹಾಗೂ ಪರಂಪರೆಯನ್ನು ಹೊಂದಿದೆ ಎಂದು ಹೇಳಿದರು.
ಕಳೆದ ನಾಲ್ಕುವರ್ಷಗಳಿಂದ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷರಾದ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಅವರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಅವರ ದೂರದೃಷ್ಟಿ ಮತ್ತು ಮೌಲ್ಯಗಳು ಬ್ಯಾಂಕಿನ ಆಡಳಿತಕ್ಕೆ ಸದಾ
ಪ್ರೇರಣೆಯಾಗಿವೆ ಎಂದು ಹೇಳಿದರು. ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕ್ ಸಾಧಿಸಿರುವ ಗಮನಾರ್ಹ ಬೆಳವಣಿಗೆಯನ್ನುಉಲ್ಲೇಖಿಸಿದ ಅವರು, ಕರ್ನಾಟಕದಾದ್ಯಂತ ಬ್ಯಾಂಕ್ ತನ್ನ ಕಾರ್ಯವ್ಯಾಪ್ತಿಯನ್ನು ಯಶಸ್ವಿಯಾಗಿ ವಿಸ್ತರಿಸಿದ್ದು,
ಎನ್‌ಪಿಎ, ಸಾಲ ಮತ್ತು ಮುಂಗಡಗಳು, ಕಾಸಾ, ಠೇವಣಿಗಳು, ಎಸ್‌ಎಲ್‌ಆರ್, ಸಿಆರ್‌ಆರ್ ಹಾಗೂ ಸಿಡಿ ಅನುಪಾತ ಸೇರಿದಂತೆ ಪ್ರಮುಖ ಬ್ಯಾಂಕಿಂಗ್ ಮಾನದಂಡಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು
ತಿಳಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಂದನೀಯ ಫಾ| ರಿತೇಶ್ ರೋಡ್ರಿಗಸ್ ಅವರು ಶಾಖೆಯ ಸ್ಥಳಾಂತರದ ಪ್ರಯುಕ್ತ ಅಧ್ಯಕ್ಷರು, ನಿರ್ದೇಶಕ ಮಂಡಳಿ, ಆಡಳಿತ, ಸಿಬ್ಬಂದಿ ಹಾಗೂ ಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿ ಜೇಮ್ಸ್ ವಿಕ್ಟರ್ ಡಿಮೆಲ್ಲೊ ಅವರು ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ನಿರ್ದೇಶಕರನ್ನು ಅಭಿನಂದಿಸಿದರು. 1912ರಲ್ಲಿ ಸ್ಥಾಪನೆಯಾದ ಎಂಸಿಸಿ ಬ್ಯಾಂಕ್ ಮೊದಲ 106 ವರ್ಷಗಳಲ್ಲಿ ನಿಧಾನಗತಿಯಲ್ಲಿ ಬೆಳವಣಿಗೆ
ಕಂಡಿದ್ದರೂ, 2018ರ ಬಳಿಕ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಎಂದು ಅವರು ಹೇಳಿದರು.
ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಹಕರು ಹಾಗೂ ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದರು. ದೀರ್ಘಕಾಲದ ಗ್ರಾಹಕರಾದ ಕೃಷ್ಣ ಬಿಂದುಮನೆ ಅವರು ಅತಿಥಿಯಾಗಿ ಭಾಗವಹಿಸಲು ಅವಕಾಶ ನೀಡಿದಕ್ಕಾಗಿ ಬ್ಯಾಂಕ್‌ಗೆ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದ ಅಂಗವಾಗಿ ಶೈಕ್ಷಣಿಕ ಸಾಧಕರಾದ ಕು. ಕರೆನ್ ಡಿಕ್ರೂಜ್ ಹಾಗೂ ಕು. ಕಿನಾರಾ ಡಿಕ್ರೂಜ್ ಅವರನ್ನು ಸನ್ಮಾನಿಸಲಾಯಿತು. ಮೋರ್ಗನ್ಸ್‌ಗೇಟ್ ಶಾಖೆಯ ಮಾಜಿ ವ್ಯವಸ್ಥಾಪಕರಾದ ಜಸಿಂತಾ ಸೆರಾವೊ
ಅವರನ್ನು ಅವರ ಜನ್ಮದಿನದ ಅಂಗವಾಗಿ ವಿಶೇಷವಾಗಿ ಗೌರವಿಸಲಾಯಿತು. ಸಮಾಜ ಸೇವಕರಾದ ಜೇಮ್ಸ್ವಿಕ್ಟರ್ ಡಿಮೆಲ್ಲೊ ಹಾಗೂ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರನ್ನೂ ಸನ್ಮಾನಿಸಲಾಯಿತು. ಅಧ್ಯಕ್ಷರು ಗಣ್ಯ
ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಡೇವಿಡ್ ಡಿಸೋಜ, ಮೆಲ್ವಿನ್ ವಾಸ್, ಅನಿಲ್ ಪತ್ರಾವೊ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಫೆಲಿಕ್ಸ್ ಡಿಕ್ರೂಸ್, ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೊ,ಮಹಾಪ್ರಬಂಧಕ ಸುನಿಲ್ ಮಿನೇಜೆಸ್, ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಪಾರ ಸಂಖ್ಯೆಯ ಗ್ರಾಹಕರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.
ಎಂಸಿಸಿ ಬ್ಯಾಂಕ್‌ನ ನಿರ್ದೇಶಕರಾದ ಹೆರಾಲ್ಡ್ ಮೊಂತೇರೊ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮೋರ್ಗನ್ಸ್‌ಗೇಟ್ ಶಾಖೆಯ ವ್ಯವಸ್ಥಾಪಕರಾದ ಡೆರಿಲ್ ಲಸ್ರಾದೊ ವಂದನಾರ್ಪಣೆ ಸಲ್ಲಿಸಿದರು..ಪ್ರೀತಂ ನೊರೊನ್ಹಾ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles