24.5 C
Karnataka
Thursday, April 30, 2026

ಅತ್ತಾವರ ಬಾಬುಗುಡ್ಡೆ 3ನೇ ಅಡ್ಡರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿ

ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಬಾಬುಗುಡ್ಡೆ 3ನೇ ಅಡ್ಡರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಯು 26ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು ಇಂಟರ್ ಲಾಕ್ ನಿಂದ ನಿರ್ಮಿಸಲಾಗಿದ್ದ ಇಲ್ಲಿನ ಹಳೆಯ ರಸ್ತೆಯನ್ನು ಇದೀಗ ಸ್ಥಳೀಯರ ಹಲವು ಕಾಲದ ಬೇಡಿಕೆಯಂತೆ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2 ರಡಿ ಕಾಂಕ್ರೀಟೀಕರಣ ಗೊಳಿಸಲಾಗುತ್ತಿದೆ. ಶೀಘ್ರದಲ್ಲಿ ಈ ಕಾಮಗಾರಿ ಮುಗಿದು ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯ ಶೈಲೇಶ್ ಬಿ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೆಶ್ ಕುಮಾರ್, ಪಶ್ಚಿಮ ಶಕ್ತಿ ಕೇಂದ್ರದ ಅಧ್ಯಕ್ಷರಾದ ಮೋಹನ್ ಪೂಜಾರಿ, ವಾರ್ಡ್ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಬೂತ್ ಅಧ್ಯಕ್ಷರುಗಳಾದ ಪ್ರಮೋದ್ ಕೊಟ್ಟಾರಿ, ದಿನೇಶ್ ಕುಲಾಲ್, ಶ್ರೀಧರ್ ಆಚಾರ್ಯ, ಕಾರ್ಯದರ್ಶಿಗಳಾದ ಶಾಂತಪ್ಪ, ಲೋಕೇಶ್, ನಾರಾಯಣ ಕುಂದರ್, ಹಿರಿಯ ಕಾರ್ಯಕರ್ತರಾದ ಪುಂಡಲೀಕ ಸುವರ್ಣ, ನಾರಾಯಣ ಶೆಟ್ಟಿ, ಮಂಡಲದ ಪಧಾಧಿಕಾರಿಗಳಾದ ಲಲಿತಾ, ಕಾರ್ಯಕರ್ತರಾದ ನೀತಾ, ತರುಣ್, ಪ್ರವೀಣ್ ಪಟ್ನ ಸತೀಶ್, ಮಧು ಕುಲಾಲ್, ಪ್ರೇಮಲತಾ ನಾಯ್ಕ, ಶ್ರೀದೇವಿ, ಸ್ಥಳೀಯರಾದ ಹೊನ್ನಯ್ಯ, ದಯಾಕರ್, ಗಣೇಶ್, ದೇವದಾಸ್ ಬೋಳೂರ್, ಸುಂದರ್, ಪ್ರದೀಪ್, ಗ್ವಾಡ್ವಿನ್, ನಟರಾಜ್, ಶ್ರೀಧರ್, ಕುದ್ಮುಲ್ ರಂಗ ರಾವ್ ಎಜುಕೇಷನಲ್ ಟ್ರಸ್ಟನ ಅಧ್ಯಕ್ಷರಾದ ಹೃದಯನಾಥ್, ಉಪಾಧ್ಯಕ್ಷರಾದ ಶ್ಯಾಮ ಕರ್ಕೇರ, ವಸಂತ್ ಬಂಗೇರ, ಪ್ರಸನ್ನ, ಮೊದಲಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles