23.2 C
Karnataka
Sunday, May 24, 2026

ಪ್ರೊ. ಬಿ. ಎ. ವಿವೇಕ ರೈ ಸಮಗ್ರ ಸಾಹಿತ್ಯ ಅವಲೋಕನ ಹಾಗೂ ಸಂವಾದ

ಮ೦ಗಳೂರು: ಮಂಗಳಗಂಗೋತ್ರಿ: ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ, ಬೆಂಗಳೂರಿನ ಅಭಿನವ ಹಾಗೂ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ವೇದಿಕೆ “ಗಿಳಿವಿಂಡು” ಇವುಗಳ ಸಂಯುಕ್ತ ಆಶ್ರಯದಲ್ಲಿ “ಆನು ಒಲಿದಂತೆ ಹಾಡುವೆ” ಸರಣಿಯ ಐದನೇ ಕಾರ್ಯಕ್ರಮವು ಮೇ 27ರ೦ದು ಬೆಳಿಗ್ಗೆ 10 ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊ. ಬಿ. ಎ. ವಿವೇಕ ರೈ ವೇದಿಕೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಪ್ರೊ. ಬಿ. ಎ. ವಿವೇಕ ರೈ ಅವರ ಸಮಗ್ರ ಸಾಹಿತ್ಯ ಅವಲೋಕನ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಹಂಪಿ ಕನ್ನಡ ವಿವಿಯ ಕುಲಪತಿ ಪ್ರೊ. ಡಿ. ವಿ. ಪರಮಶಿವಮೂರ್ತಿ , ಮಂಗಳೂರು ವಿವಿ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ನಾಗಪ್ಪಗೌಡ, ಹಂಪಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊ. ವೆಂಕಟಗಿರಿ ದಳವಾಯಿ, ಬೆಂಗಳೂರಿನ ಅಭಿನವದ ರವಿಕುಮಾರ್ ಹಾಗೂ ಗಿಳಿವಿಂಡು ವೇದಿಕೆ ಅಧ್ಯಕ್ಷ ಪ್ರೊ.ಬಿ ಶಿವರಾಮ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.

ಬಳಿಕ ನಡೆಯುವ “ಪ್ರೊ. ಬಿ. ಎ. ವಿವೇಕ ರೈ ಅವರ ಸಮಗ್ರ ಸಾಹಿತ್ಯ ಅವಲೋಕನ” ಕಾರ್ಯಕ್ರಮದಲ್ಲಿ ಹಂಪಿಯ ಪ್ರೊ. ವಿಜಯ ಪೂಣಚ್ಚ, ಕುಂದಾಪುರದ ಡಾ. ರೇಖಾ ಬನ್ನಾಡಿ ಹಾಗೂ ಮೈಸೂರಿನ ಡಾ. ಆರ್. ಸತೀಶ್ ಅವರು ವಿಚಾರ ಮಂಡನೆ ನಡೆಸಲಿದ್ದಾರೆ.

ಅಪರಾಹ್ನ ನಡೆಯುವ “ಪ್ರೊ. ಬಿ. ಎ. ವಿವೇಕ ರೈ ಅವರೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಪ್ರೊ. ಕೆ. ಚಿನ್ನಪ್ಪಗೌಡ ಸಮನ್ವಯಕಾರರಾಗಿದ್ದು, ಡಾ. ತಾಳ್ತಜೆ ವಸಂತಕುಮಾರ್, ಡಾ. ಅಭಯಕುಮಾರ್, ಡಾ. ನರಸಿಂಹಮೂರ್ತಿ, ಡಾ. ಇಂದಿರಾ ಹೆಗಡೆ, ರಾಜಶೇಖರ ಹಳೆಮನೆ, ಡಾ.ಚೇತನ್ ಸೋಮೇಶ್ವರ, ಪ್ರೊ. ಸೋಮಣ್ಣ ಹೊಂಗಳ್ಳಿ, ಡಾ. ಸಂಪತ್ ಕುಮಾರ್, ನಾಗರಾಜ್ ಹೆಗಡೆ ಅಪಗಾಲ, ಶಶಿರಾಜ್ ಕಾವೂರು ಹಾಗೂ ಚಂದ್ರಕಲಾ ನಂದಾವರ ಮೊದಲಾದವರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ನಾಗಪ್ಪಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles