24.7 C
Karnataka
Friday, May 29, 2026

ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಡಾ.ಬಿ.ಆರ್ ಅಂಬೇಡ್ಕರ್ /ಇಂದಿರಾಗಾಂಧಿ/ ನಾರಾಯಣಗುರು ವಸತಿ ಶಾಲೆಗಳಲ್ಲಿ 2026-27ನೇ ಸಾಲಿಗೆ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರು/ಉಪನ್ಯಾಸಕರುಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಸಂಬಂಧ ಅರ್ಹರಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜೂನ್ 5 ರೊಳಗೆ ನಗರದ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಛೇರಿಗೆ ಖುದ್ದಾಗಿ ಸಲ್ಲಿಸಬೇಕು.
ಅರ್ಹತೆ : ವಸತಿ ಶಾಲೆಗಳ ಅತಿಥಿ ಶಿಕ್ಷಕರು ಸಂಬಂಧಿಸಿದ ವಿಷಯದಲ್ಲಿ ಕಡ್ಡಾಯವಾಗಿ ಪದವಿ ಶಿಕ್ಷಣ ಹೊಂದಿರಬೇಕು. ಕಡ್ಡಾಯವಾಗಿ ಬಿ.ಇಡಿ/ಬಿ.ಪಿ.ಇಡಿ ಶಿಕ್ಷಣ ಹೊಂದಿರಬೇಕು. ಕಡ್ಡಾಯವಾಗಿ ಟಿ.ಇ.ಟಿ. ಉತ್ತೀರ್ಣತೆ ಹೊಂದಿರಬೇಕು. ಕಂಪ್ಯೂಟರ್ ಶಿಕ್ಷಕರಿಗೆ ಬಿ.ಇಡಿ ವಿದ್ಯಾರ್ಹತೆಯಿಂದ ವಿನಾಯಿತಿ ನೀಡಿದೆ.
ಖಾಲಿ ಇರುವ ಹುದ್ದೆಗಳು : ಕನ್ನಡ, ಆಂಗ್ಲ, ಹಿಂದಿ, ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ ಮತ್ತು ಕಂಪ್ಯೂಟರ್ ಶಿಕ್ಷಣ, ಶಿಕ್ಷಕರ ಹುದ್ದೆಗಳು.
ವಸತಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಸಂಬಂಧಿಸಿದ ವಿಷಯದಲ್ಲಿ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಶಿಕ್ಷಣ ಹೊಂದಿರಬೇಕು. ಕಡ್ಡಾಯವಾಗಿ ಬಿ.ಇಡಿ ಶಿಕ್ಷಣ ಹೊಂದಿರಬೇಕು. ಕಂಪ್ಯೂಟರ್ ಉಪನ್ಯಾಸಕರಿಗೆ ಬಿ.ಇಡಿ ವಿದ್ಯಾರ್ಹತೆಯಿಂದ ವಿನಾಯಿತಿ ನೀಡಿದೆ.
ಖಾಲಿ ಇರುವ ಹುದ್ದೆಗಳು : ಕನ್ನಡ, ಆಂಗ್ಲ, ಗಣಿತಶಾಸ್ತ್ರ, ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಉಪನ್ಯಾಸಕ ಹುದ್ದೆಗಳು.
ಮೇಲ್ಕಂಡ ಹುದ್ದೆಗಳಿಗೆ ನಗರದ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಛೇರಿಯಲ್ಲಿ ಜೂನ್ 8 ರಂದು ಬೆಳಿಗ್ಗೆ 10.30ಕ್ಕೆ ಪ್ರಾತ್ಯಕ್ಷಿತೆಯನ್ನು ನಡೆಸಲಾಗುತ್ತದೆ. ಸಂಬಂಧಿಸಿದ ಅರ್ಜಿದಾರರು ಹಾಜರಾಗಲು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles