22.5 C
Karnataka
Saturday, June 6, 2026

ಕೆ.ಪಿ.ಟಿ ಡಿಪ್ಲೊಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಮಂಗಳೂರು: ಕರ್ನಾಟಕ ಪಾಲಿಟೆಕ್ನಿಕ್ (ಸ್ವಾಯತ್ತತೆ) ಮಂಗಳೂರು 2026-27ನೇ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಡಿಪ್ಲೊಮಾ ಕೋರ್ಸ್‍ಗಳಿಗೆ ಪ್ರಥಮ/ದ್ವಿತೀಯ/ಅಂತಿಮ ಹಂತದಲ್ಲಿ ಭರ್ತಿಯಾಗದೇ ಉಳಿದಿರುವ ಸೀಟುಗಳನ್ನು ತುಂಬಲು ಆಫ್‍ಲೈನ್ ಮುಖಾಂತರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಜೂನ್ 6 ರಿಂದ ಜೂನ್ 9 ರವರೆಗೆ ಸಂಸ್ಥೆಗೆ ಖುದ್ದಾಗಿ ಭೇಟಿ ನೀಡಿ ಅರ್ಜಿಗಳನ್ನು ಪಡೆಯಬಹುದು. ಅಭ್ಯರ್ಥಿಗಳ ಆದ್ಯತೆಯ ಮೇರೆಗೆ ಮೆರಿಟ್ ಹಾಗೂ ರೋಸ್ಟರ್‍ಗನುಗುಣವಾಗಿ ಶೇ. 75% ಎಸ್.ಎಸ್.ಎಲ್.ಸಿ ಹಾಗೂ 25% ಕೆ.ಪಿ.ಟಿ- ಸಿ.ಎ.ಟಿ ಪರೀಕ್ಷೆಯ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಸೂಕ್ತ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles