28.2 C
Karnataka
Monday, June 15, 2026

ಎಂಸಿಸಿ ಬ್ಯಾಂಕ್‌ನಲ್ಲಿ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಮ೦ಗಳೂರು: ಎಂಸಿಸಿ ಬ್ಯಾಂಕ್‌ನ 2025–26ನೇ ಹಣಕಾಸು ವರ್ಷದ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು 2026ರ ಜೂನ್ 13ರಂದು ಮಂಗಳೂರು ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಾಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ಮ್ಯಾನೇಜರ್‌ಗಳಾದ ವಂ. ಫಾ. ಮ್ಯಾಕ್ಸಿಂ ರೊಸಾರಿಯೊ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಎಂಸಿಸಿ ಬ್ಯಾಂಕ್ ಅನ್ನು ಕ್ಯಾಥೋಲಿಕ್ ಸಮುದಾಯದ ಹೆಮ್ಮೆ ಮತ್ತು ಅಮೂಲ್ಯ ರತ್ನವೆಂದು ಬಣ್ಣಿಸಿ, ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಸಾಧಿಸಿರುವ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಸಹಕಾರ ರತ್ನ ಅನಿಲ್ ಲೋಬೋ ಅವರು 2025–26ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ದಾಖಲಿಸಿದ ಐತಿಹಾಸಿಕ 25% ಬೆಳವಣಿಗೆಗೆ ಸಿಬ್ಬಂದಿಯನ್ನು ಅಭಿನಂದಿಸಿದರು. ಈ ಸಾಧನೆಯು ಸಿಬ್ಬಂದಿಯ ಸಮೂಹ ಬದ್ಧತೆ, ಕಠಿಣ ಪರಿಶ್ರಮ ಹಾಗೂ ಗ್ರಾಹಕ ಕೇಂದ್ರಿತ ಸೇವೆಯ ಪ್ರತಿಫಲವಾಗಿದೆ ಎಂದು ಹೇಳಿದರು

ಬ್ಯಾಂಕಿನ ಸಲಹೆಗಾರರು ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಾಜಿ ಉಪ ಮಹಾಪ್ರಬಂಧಕ ಎಸ್.ಎಚ್. ವಿಶ್ವೇಶ್ವರಯ್ಯ ಅವರು ಬ್ಯಾಂಕಿನ ಠೇವಣಿ, ಸಾಲ ವಿತರಣೆ, ವ್ಯವಹಾರ ವಹಿವಾಟು, ಬೆಳವಣಿಗೆಯ ಪ್ರವೃತ್ತಿ ಹಾಗೂ ಎನ್‌ಪಿಎ ಸ್ಥಿತಿಯನ್ನು ಒಳಗೊಂಡ ಸಮಗ್ರ ಕಾರ್ಯಕ್ಷಮತಾ ವರದಿಯನ್ನು ಮಂಡಿಸಿದರು.

ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಲೂರ್ಡ್ಸ್ ಸೆಂಟ್ರಲ್ ಶಾಲೆ, ಬಿಜೈನ ಪ್ರಾಂಶುಪಾಲ ವಂ. ಫಾ. ಜಾನ್ ಎಲ್. ಸಿಕ್ವೇರಾ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಎಸಿಪಿ ರವೀಶ್ ಎಸ್. ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಬ್ಯಾಂಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ಪುತ್ತೂರು ಶಾಖೆಯ ವ್ಯವಸ್ಥಾಪಕಐರಿನ್ ಡಿಸೋಜಾ ಹಾಗೂ ಬಜ್ಪೆ ಶಾಖೆಯ ಸಿಬ್ಬಂದಿಯಾದ ಕುಮಾರಿ ವೈಲೆಟ್ ಕ್ರಾಸ್ತಾ ಅವರನ್ನು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗೌರವಿಸಲಾಯಿತು. ಇತ್ತೀಚೆಗೆ ವಿವಾಹವಾದ ಸಿಬ್ಬಂದಿಯವರನ್ನೂ ಅಭಿನಂದಿಸಿ ಸನ್ಮಾನಿಸಲಾಯಿತು.2025–26ನೇ ಸಾಲಿನ ಸ್ಟಾರ್ ಅಚೀವರ್ಸ್ ಪ್ರಶಸ್ತಿಯನ್ನು ಕುಲಶೇಖರ ಶಾಖೆಯ ವ್ಯವಸ್ಥಾಪಕರಾದ ವಿಲ್ಮಾ ಜ್ಯೋತಿ ಸಿಕ್ವೇರಾ, ಮೂಡುಬಿದಿರೆ ಶಾಖೆಯ ಶರೋನ್ ರೊಸಾರಿಯೊ, ಶಿರ್ವ ಶಾಖೆಯ ಅನ್ಸಿಲ್ಲಾ ಫೆರ್ನಾಂಡಿಸ್, ಕುಂದಾಪುರ ಶಾಖೆಯ ಜ್ಯೋತಿ ಬ್ಯಾರೆಟ್ಟೋ ಹಾಗೂ ಬೈಂದೂರು ಶಾಖೆಯ ಸಂದೀಪ್ ಕ್ವಾಡ್ರಸ್ ಅವರಿಗೆ ಪ್ರದಾನಿಸಲಾಯಿತು.

ಠೇವಣಿ ಮತ್ತು ಸಾಲ ವಿಭಾಗದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಯ ಪ್ರಶಸ್ತಿಯನ್ನು ಅಶೋಕನಗರ ಶಾಖೆ ಪಡೆದುಕೊಂಡಿತು. ಠೇವಣಿ ಸಂಗ್ರಹಣಾ ಶ್ರೇಷ್ಠತಾ ಪ್ರಶಸ್ತಿಯನ್ನು ಫೌಂಡರ್ಸ್, ಕುಲಶೇಖರ, ಮೂಡುಬಿದಿರೆ, ಶಿರ್ವ, ಬಜ್ಪೆ ಹಾಗೂ ಕಾರ್ಕಳ ಶಾಖೆಗಳು ಪಡೆದುಕೊಂಡರೆ, ಸಾಲ ಬೆಳವಣಿಗೆ ಶ್ರೇಷ್ಠತಾ ಪ್ರಶಸ್ತಿಯನ್ನು ಕುಂದಾಪುರ, ಪುತ್ತೂರು, ಬಿ.ಸಿ.ರೋಡ್ ಹಾಗೂ ಬ್ರಹ್ಮಾವರ ಶಾಖೆಗಳು ಪಡೆದವು. ಕಾಸಾ, ಠೇವಣಿ ಮತ್ತು ಸಾಲ ಗುರಿಗಳ ಸಾಧನೆಗಾಗಿ ನೀಡಲಾದ ಅತ್ಯುತ್ತಮ ಶಾಖೆ ಸಾಧನೆ ಪ್ರಶಸ್ತಿಯನ್ನು ಉಡುಪಿ, ಬೆಳ್ತಂಗಡಿ, ಬೆಳ್ಮಣ್, ಬೈಂದೂರು ಹಾಗೂ ಸಂತೆಕಟ್ಟೆ ಶಾಖೆಗಳು ಪಡೆದುಕೊಂಡವು. ಅತಿ ಹೆಚ್ಚು ವ್ಯವಹಾರ ವಹಿವಾಟು ಪ್ರಶಸ್ತಿಯನ್ನು ಫೌಂಡರ್ಸ್ ಶಾಖೆ ಪಡೆದುಕೊಂಡರೆ, ಒಂದು ವರ್ಷದ ಮೈಲಿಗಲ್ಲು ಸಾಧನೆ ಪ್ರಶಸ್ತಿಯನ್ನು ಬೆಳ್ಮಣ್, ಬೆಳ್ತಂಗಡಿ ಹಾಗೂ ಬೈಂದೂರು ಶಾಖೆಗಳು ಪಡೆದುಕೊಂಡವು.

ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಅಂಡ್ರೂ ಡಿಸೋಜ, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ಡಾ} ಜೆರಾಲ್ಡ್ ಪಿಂಟೊ, ಫೆಲಿಕ್ಸ್ ಡಿಕ್ರುಜ್, ವ್ಯತ್ತಿಪರ ನಿರ್ದೇಶಕ ಸಿ.ಜಿ.ಪಿಂಟೊ ಉಪಸ್ಥಿತರಿದ್ದರು. ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ವಂದಿಸಿದರು. ಐಟಿ ವಿಭಾಗದ ಮುಖ್ಯಸ್ಥರಾದ ಅಲ್ವಿನ್ ಝೇವಿಯರ್ ಡಿಸೋಜಾ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles