ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ದ ದಿನಾಂಕ 5-11-2023 ರಿಂದ 12-11-2023 ರ ವರೆಗೆ ಒಟ್ಟು 2543 ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಾಲನೆ , ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಪಾಲನೆ ಮಾಡದೇ ಇರುವ ವಾಹನ ಸವಾರ / ಚಾಲಕರ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿತ್ತು.
ಮದ್ಯಪಾನ ಮಾಡಿ ವಾಹನ ಚಾಲನೆಯ 21 ಪ್ರಕರಣಗಳು, ನೋಪಾಕಿ೯೦ಗ್ ಸ್ಥಳದಲ್ಲಿ ಒಅಹನ ನಿಲುಗಡೆಯ 448 ಪ್ರಕರಣಗಳು, ಹೆಲ್ಮೆಟ್ ಧರಿಸದೆ ಚಾಲನೆಯ 768 ಪ್ರಕರಣಗಳು, ಬಸ್ ನಲ್ಲಿ ಫುಟ್ ಬೋಡ್೯ ಪ್ರಯಾಣ ಹಾಗೂ ಮಿತಿಗಿ೦ತ ಹೆಚ್ಚಿನ ಪ್ರಯಾಣಿಕರ 205ಪ್ರಕರಣಗಳು ಇದರಲ್ಲಿ ಸೇರಿವೆ.