25.2 C
Karnataka
Sunday, May 19, 2024

ರಾಜ್ಯಮಟ್ಟದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್ -3ರ ಪಂದ್ಯಾಕೂಟ ಮತ್ತು ತೃತೀಯ ವಾರ್ಷಿಕೋತ್ಸವ ಸಮಾರಂಭ

ಸುರತ್ಕಲ್: ಸುರತ್ಕಲ್ ಸ್ಪೋಟ್ಸ್೯ ಆ್ಯಂಡ್ ಕಲ್ಚರಲ್ ಕ್ಲಬ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ 45 ವರ್ಷ ಮೇಲ್ಪಟ್ಟ ಆಟಗಾರರ ತಂಡಗಳ ಓವರ್ ಆಮ್೯ ಹಿರಿಯರ ಕ್ರಿಕೆಟ್ ಪಂದ್ಯಾಟ ಸೀಸನ್ 3ರ ಪಂದ್ಯಾಕೂಟ ಮಾಚ್೯ 2 ಮತ್ತು 3 ರಂದು ಸುರತ್ಕಲ್ ಗೋವಿಂದ ದಾಸ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯಾಕೂಟದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಅರಸೀಕೆರೆ , ದ.ಕ ಜಿಲ್ಲೆ, ಉಡುಪಿ ಜಿಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಲಿದೆ.
ವಿಜೇತ ತಂಡ ಟ್ರೋಫಿಯೊಂದಿಗೆ 1,00,000 ನಗದು, ದ್ವಿತೀಯ ಸ್ಥಾನಿ ಟ್ರೋಫಿಯೊಂದಿಗೆ 50,005 ನಗದು ಹಾಗೂ ಸೆಮಿಫೈನಲ್ ಪರಾಜಿತ ತಂಡಕ್ಕೆ ಟ್ರೋಫಿಯೊಂದಿಗೆ ಗೌರವಧನ ಮತ್ತು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು.

ಸುರತ್ಕಲ್ ಸ್ಪೋಟ್ಸ್೯ ಕಲ್ಚರಲ್ ಕ್ಲಬ್ ನ ತೃತೀಯ ವಾರ್ಷಿಕೋತ್ಸವ ಮಾಚ್೯ 4 ರಂದು ಸಂಜೆ 6 ಗಂಟೆಗೆ ಗೋವಿಂದ ದಾಸ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ ಗಂಟೆ 6.00ರಿಂದ ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭದ ಬಳಿಕ ಕಲಾ ಸಂಗಮ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ರವರ ಶಿವದೂತೆ ಗುಳಿಗೆ ನಾಟಕದ ಪ್ರದರ್ಶನವೂ ನಡೆಯಲಿದೆ ಎಂಸು ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಕ್ಲಬ್ ನ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles