ಮಂಗಳೂರು: ವ್ಯಕ್ತಿಗೆ ಮೂವರು ಚೂರಿಯಿ೦ದ ಇರಿದು ಗ೦ಭೀರ ಗಾಯಗೊಳಿಸಿದ ಘಟನೆ ನಗರದ ನೆಹರೂ ಮೈದಾನ್ ನ ಪುಟ್ಟಾಲ್ ಗ್ರೌಂಡ್ ನಲ್ಲಿ ಸೋಮವಾರ ನಡೆದಿದೆ. ಗುನ್ನು ಚೌದರಿ ಎಂಬಾತ ಗಾಯಗೊ೦ಡ ವ್ಯಕ್ತಿ.
ಗುನ್ನು ಚೌದರಿ ಸೋಮವಾರ ಮಧ್ಯಾಹ್ನ ಸುಮಾರು 1-30 ಗಂಟೆಗೆ ಪುಟ್ಟಾಲ್ ಗ್ರೌಂಡ್ ನ ಪುಟ್ ಪಾತ್ ಮೇಲೆ ಕುಳಿತುಕೊಂಡಿದ್ದ. ಆ ವೇಳೆ ಅಲ್ಲಿಗೆ ಬಂದ ಪರಿಚಯದ ಪೈಸಲ್, ಸಂತು ಮತ್ತು ಇನ್ನೊರ್ವ ಆತನನ್ನು ಗುರಾಯಿಸಿ ನೋಡಿದ್ದು, ಇದೇ ವಿಚಾರದಲ್ಲಿ ಆತನಿಗೆ ಮತ್ತು ಆ ಮೂರು ಮಂದಿಗೆ ಮಾತಿನ ವಾಗ್ವಾದ ನಡೆದಿದೆ.ಗುನ್ನು ಚೌದರಿ ಸ್ಥಳದಿಂದ ಎದ್ದು ಹೊರಡಲು ತಯಾರಾದಾಗ ಆ ಮೂರು ಮಂದಿ ಹೋಗದಂತೆ ತಡೆದು ನಿಲ್ಲಿಸಿದ್ದು ಪೈಸಲ್ ಎಂಬಾತನು “ನೀನು ಮೈದಾನದಲ್ಲಿ ಇರಬಾರದು, ನೀನು ಇಲ್ಲಿಯಾ ಡಾನಾ? ನಿನ್ನನ್ನು ಇಲ್ಲಿಯೇ ಕೊಂದರೆ ಎಲ್ಲಾವು ಸರಿಯಾಗುತ್ತದೆ ಎಂದು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಅವಾಚ್ಯವಾಗಿ ಬೈದು ಕೈಯಲ್ಲಿದ್ದ ಚಿಕ್ಕ ಕತ್ತಿಯಿಂದ ಆತನ ಎದೆಗೆ ಹಾಕಲು ಕತ್ತಿ ಬೀಸಿದ. ಗುನ್ನು ಚೌದರಿ ಹಿಂದೆ ಸರಿದಾಗ ಕತ್ತಿಯ ತುದಿ ಆತನ ಶರ್ಟ್ ಗೆ ತಾಗಿ ಶರ್ಟ್ ಹರಿದಿರುತ್ತದೆ. ಆಗ ಸಂತು ಎಂಬಾತನು ಪೈಸಲ್ ನ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು, ಅವರ ಜೊತೆಯಲ್ಲಿದ್ದ ಇನ್ನೋರ್ವ ಆತನ ಕೈಯಿಂದ ಎದೆಗೆ ಬಲವಾಗಿ ಗುದ್ದಿ ನಿನ್ನನ್ನು ಬಿಡುವುದಿಲ್ಲವೆಂದು ಹೇಳಿ ಕೈಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದು ಸಂತು ಎಂಬಾತನು ಕೈಯಲ್ಲಿದ್ದ ಕತ್ತಿಯಿಂದ ಆತನ ಹೊಟ್ಟೆಗೆ ಇರಿದು ಗ೦ಭೀರ ಗಾಯಗೊಳಿಸಿದ .ತೀವ್ರಗಾಯಗೊಂಡ ಆತನನ್ನು ಮಂಗಳೂರು ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮ೦ಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.