ಬಂಟ್ವಾಳ: ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಂಜಲ್ಪಾದೆ ಎಂಬಲ್ಲಿ, ಸಾರ್ವಜನಿಕ ಗುಡ್ಡದಲ್ಲಿ ಸಂಜೆ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾಗ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ರಾಮಕೃಷ್ಣ ಪೊಲೀಸ್ ಹಾಗೂ ಸಿಬ್ಬಂದಿಗಳ ತಂಡ ಜುಗಾರಿ ಆಟದಲ್ಲಿ ನಿರತರಾಗಿದ್ದ ಬಂಟ್ವಾಳ ಸಜಿಪಮುನ್ನೂರು ನಿವಾಸಿಗಳಾದ ಪ್ರವೀಣ್ ಬೆಳ್ಚಡ (40), ರಂಜಿತ್ (26), ನವೀನ್ (31), ಪ್ರವೀಣ್ ಪೂಜಾರಿ (40) ಮತ್ತು ಹರೀಶ್ (39) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ ನಗದು ಹಣ ರೂ. 1,520/-, ಇಸ್ಪಿಟ್ ಕಾರ್ಡ್ ಗಳು ಹಾಗೂ 2 ದ್ವಿಚಕ್ರ ವಾಹನ ಸ್ವಾಧೀನಪಡಿಸಿಕೊಂಡಿರುತ್ತಾರೆ. ಅವುಗಳ ಒಟ್ಟು ಅಂದಾಜು ಮೌಲ್ಯ ರೂ. 81,520/- ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.