ಮಂಗಳೂರು: ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರ ಬ೦ಧಿಸಿದ್ದಾರೆ.
ಮೂಲತ ಚಿಕ್ಕಮಗಳೂರು ಜಿಲ್ಲೆಯ ತಮಿಳ್ ಕಾಲೊನಿ ಸಂತೆ ಮಾರ್ಕೆಟ್ ನಿವಾಸಿ ಪ್ರಸ್ತುತ ವಿಟ್ಲ ಮಂಗಿಲಪದವುನಲ್ಲಿ ವಾಸವಿರುವ ಪ್ಯಾರೇಜಾನ್ @ ಸೇಟು, (37 ), ವಿಟ್ಲ ಮಂಗಿಲಪದವು ನಿವಾಸಿ ಬದ್ರುದ್ದೀನ್ @ ಬದ್ರು(28 )ಹಾಗೂ ತಮಿಳುನಾಡು ನಾಗಪಟ್ಟಿನಂ ಜಿಲ್ಲೆಯ ರಾಜೇಶ್.(22 ) ಬ೦ಧಿತ ಆರೋಪಿಗಳು.
ಆರೋಪಿಗಳಿ೦ದ 1.57 ಕೋಟಿ ರೂ. ಮೌಲ್ಯದ 1.575 ಕೆಜಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್),ಸ್ವಿಪ್ಟ್ ಕಾರು,2 ಮೊಬೈಲ್ ಸೇರಿದ೦ತೆ ಒಟ್ಟು 1 ಕೋಟಿ, 62 ಲಕ್ಷದ 80 ಸಾವಿರ ರೂ. ಮೌಲ್ಯದಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಿನಾಂಕ 25-11-2023 ರಂದು ಮಂಗಳೂರು ನಗರದ ಪಂಪ್ ವೆಲ್ ಬಳಿ 4ಮ೦ದಿ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಎಂಬ ಬೆಲೆಬಾಳುವ ವನ್ಯ ಜೀವಿ ಉತ್ಪನ್ನವನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬ೦ಧಿಸಿದರು.
ಪತ್ತೆ ಕಾರ್ಯವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆಅವರ ನೇತೃತ್ವದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿಯವರು ನಡೆಸಿದ್ದರು.