26 C
Karnataka
Saturday, April 19, 2025

ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಜನರ ಅಭಿವೃದ್ಧಿಯ ಪರವಾದ ತೀಪು೯:ವೇದವ್ಯಾಸ್ ಕಾಮತ್

ಮ೦ಗಳೂರು” ಆರ್ಟಿಕಲ್ 370 ರದ್ದತಿಗೆ ಸಂಬಂಧಿಸಿದಂತೆ ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಈ ಮೂಲಕ ದೇಶವನ್ನು ವಿಭಜಿಸಲು ಯತ್ನಿಸುವವರಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಇಡೀ ಭಾರತ ಮತ್ತೆ ಒಂದುಗೂಡುತ್ತಿದೆ. ಹಲವು ದಶಕಗಳ ನಂತರ ಜಮ್ಮು ಕಾಶ್ಮೀರದ ಜನರಿಗೆ ಹೊಸ ಆಶಾಭಾವನೆಯ ಬಾಗಿಲುಗಳು ತೆರೆದುಕೊಳ್ಳುತ್ತಿವೆ ಎಂಬುದನ್ನು ತೀರ್ಪು ಹೊರಬಂದ ಕೂಡಲೇ ಜಮ್ಮು ಕಾಶ್ಮೀರ ಮೂಲ ನಿವಾಸಿಗಳ ಸಂಭ್ರಮಾಚರಣೆ ನೋಡಿದರೆ ತಿಳಿಯುತ್ತದೆ. ಜಮ್ಮು, ಕಾಶ್ಮೀರ ಮತ್ತು ಲಡಾಖ್‌ನ ಜನರ ಅಭಿವೃದ್ಧಿಯ ಪರವಾದ ತೀರ್ಪಿಗೆ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಇಡೀ ದೇಶದ ಪರವಾಗಿ ಕೃತಜ್ಞತೆಗಳು .ತೀರ್ಪುನ್ನು ಉಲ್ಲೇಖಿಸಿ, “ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಜನರ ಕನಸುಗಳನ್ನು ಈಡೇರಿಸುವ ಸರ್ಕಾರದ ಬದ್ಧತೆ ಅಚಲವಾಗಿದೆ. ಸುಪ್ರೀಂಕೋರ್ಟ್ ಪಂಚ ಪೀಠದ ಸರ್ವಾನುಮತದ ಈ ತೀರ್ಪು ಭಾರತದ ಭವಿಷ್ಯದ ಭರವಸೆಯ ದಾರಿದೀಪವಾಗಿದೆ. ಬಲಿಷ್ಠ ಮತ್ತು ಅಖಂಡ ಭಾರತವನ್ನು ನಿರ್ಮಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಸಾಕ್ಷಿಯಾಗಿದೆ” ಎಂದು ಪ್ರಧಾನಿ ಮೋದಿಯವರು ಹೇಳಿದ್ದು ನಯಾ ಭಾರತ ಹಾಗೂ ನಯಾ ಕಾಶ್ಮೀರಕ್ಕೆ ಉದಾಹರಣೆಯಾಗಿದೆ ಎಂದು ಶಾಸಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles