24.5 C
Karnataka
Thursday, April 30, 2026

ಸಾಹಿತಿ‌ ಮುಹಮ್ಮದ್ ಬಡ್ಡೂರ್‌ಗೆ ‘ನಂದಿ ಫಿಲ್ಮ್’ ಪ್ರಶಸ್ತಿ

ಮಂಗಳೂರು:ಬಹುಭಾಷಾ ಕವಿ, ಸಾಹಿತಿ, ಚಲನಚಿತ್ರ ನಟ‌ ಮುಹಮ್ಮದ್ ‌ಬಡ್ಡೂರ್ ಅವರಿಗೆ ಪ್ರತಿಷ್ಠಿತ ‘ಕರ್ನಾಟಕ ನಂದಿ ಫಿಲ್ಮ್ -2023’ ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮುಹಮ್ಮದ್ ಬಡ್ಡೂರು ಅವರ ಪರವಾಗಿ ಚಲನಚಿತ್ರ ನಿರ್ದೇಶಕ ಅಂಬಳಿಕೆ ರವಿ ಅವರು ‘ಕಾಂತಾರ’ ಸಿನೆಮಾದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಸಾಹಿತ್ಯ ಮತ್ತು ‌ನಟನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಮುಹಮ್ಮದ್ ಬಡ್ಡೂರ್ ಅವರು “ಅಬ್ಬ” ಮತ್ತು “ಮುಸಾಫಿರ್” ಬ್ಯಾರಿ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಾಹಿತ್ಯ ಮತ್ತು ನಟನೆ ಕ್ಷೇತ್ರದಲ್ಲಿ ಮುಹಮ್ಮದ್ ಬಡ್ಡೂರ್ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ‌ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ‌ಪ್ರದಾನ ಕಾರ್ಯಕ್ರಮದಲ್ಲಿ ಚಿತ್ರನಟರಾದ ರವಿಚಂದ್ರನ್, ವಿನೋದ್ ರಾಜ್, ಶ್ರೀನಾಥ್, ಧ್ರುವ ಸರ್ಜಾ, ಉಮಾಶ್ರೀ, ಅನು ಪ್ರಭಾಕರ್ ಹಾಗೂ ಆಯೋಜಕರಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾ.ಮಾ.ಹರೀಶ್, ನಿರ್ಮಾಪಕ ನಂದಳಿಕೆ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್, ಅನಿತಾ ರೆಡ್ಡಿ, ಭಾ.ಮಾ. ಗಿರೀಶ್, ಹರ್ಷಿತಾ, ನಂದಿತಾ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles