23.1 C
Karnataka
Saturday, November 23, 2024

ಸುಪ್ರೀಂ ತೀರ್ಪು ದೇಶದ ಅಖಂಡತೆಯ ಪ್ರತೀಕ:ಬಿಜೆಪಿ

ಮ೦ಗಳೂರು: ಆರ್ಟಿಕಲ್ 370 ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಾಗ ಅದನ್ನು ವಿರೋಧಿಸಿದ ಕಾಂಗ್ರೆಸ್ “ಜಮ್ಮು ಕಾಶ್ಮೀರ ಆಂತರಿಕ ವಿಚಾರವಲ್ಲ, ಕಾಂಗ್ರೆಸ್ ಪಕ್ಷ ಪುನ್ಹ ಅಧಿಕಾರಕ್ಕೆ ಬಂದರೆ 370 ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಹೇಳಿತ್ತು”. ಇಂದಿನ ಸುಪ್ರೀಂಕೋರ್ಟಿನ ತೀರ್ಪು ಕಾಂಗ್ರೆಸ್ಸಿನ ವಿಭಜನಾ ಮನಸ್ಥಿತಿಗೆ ತಣ್ಣೀರೆರಚಿದೆ ಮತ್ತು ದೇಶದ ಅಖಂಡತೆಯನ್ನು ಎತ್ತಿ ಹಿಡಿದಿದೆ ಎ೦ದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹೇಳಿದೆ.
ತಮ್ಮ ಜೀವನವನ್ನೇ ರಾಷ್ಟ್ರದ ಏಕತೆಗಾಗಿ ಸಮರ್ಪಿಸಿಕೊಂಡ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಹೇಳಿದ “ಒಂದು ದೇಶ, ಒಂದು ಸಂವಿಧಾನ, ಒಂದು ಧ್ವಜ” ಅಖಂಡ ಭಾರತದ ಪರಿಕಲ್ಪನೆಯ ಮಾತುಗಳು ಇಂದು ಮತ್ತೆ ಮಾರ್ದನಿಸಿದೆ. ಇದು ದೇಶದ ಜನತೆಯ ಪಾಲಿಗೆ ಮಾತ್ರವಲ್ಲ, ದಶಕಗಳ ಕಾಲ ಹಿಂಸೆ, ರಕ್ತಪಾತವನ್ನೇ ಕಂಡ ಕಾಶ್ಮೀರದ ಜನತೆಗೆ ಸಂದ ಜಯವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles