17.5 C
Karnataka
Friday, November 22, 2024

ಕ್ರೀಡಾ ಹಾಸ್ಟೆಲ್: ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ

ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2024-25 ನೇ ಸಾಲಿಗೆ ಜಿಲ್ಲಾ ಕ್ರೀಡಾ ವಸತಿ ನಿಲಯದ 5ನೇ ತರಗತಿಗೆ ಪ್ರವೇಶ ಹಾಗೂ ರಾಜ್ಯದ ಎಲ್ಲಾ ಕ್ರೀಡಾ ಶಾಲೆ ಅಥವಾ ವಸತಿ ನಿಲಯಗಳ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ. ಗೆ ಪ್ರವೇಶ ನೀಡಲು ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ.
2023-24ನೇ ಸಾಲಿಗೆ ರಾಜ್ಯ/ಜಿಲ್ಲಾ ಕ್ರೀಡಾ ಶಾಲೆ/ವಸತಿ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆಗೆ ಪ್ರಕ್ರಿಯೆಯನ್ನು ತಾಲೂಕುವಾರು ಈ ಕೆಳಕಂಡ ದಿನಗಳಂದು ನಡೆಸಲಾಗುವುದು.
1.ಉಳ್ಳಾಲ: 18-12-2023 ರಂದು ಬೆಳಿಗ್ಗೆ 10 ಗಂಟೆಯಿಂದ, ಮಂಗಳೂರು ವಿಶ್ವವಿದ್ಯಾಲಯ ಮೈದಾನ, ಕೊಣಾಜೆ
2.ಪುತ್ತೂರು: 19-12-2023 ರಂದು ಬೆಳಿಗ್ಗೆ 10 ಗಂಟೆಯಿಂದ, ತಾಲ್ಲೂಕು ಕ್ರೀಡಾಂಗಣ, ಕೊಂಬೆಟ್ಟು, ಪುತ್ತೂರು

  1. ಬಂಟ್ವಾಳ: 20-12-2023 ರಂದು ಬೆಳಿಗ್ಗೆ 10 ಗಂಟೆಯಿಂದ, ವಿಠಲ ಪ್ರೌಢಶಾಲೆ, ವಿಟ್ಲ
    4.ಬೆಳ್ತಂಗಡಿ: 21-12-2023 ರಂದು ಬೆಳಿಗ್ಗೆ 10 ಗಂಟೆಯಿಂದ, ಸರ್ಕಾರಿ ಪ್ರೌಢಶಾಲೆ, ಪುಂಜಾಲಕಟ್ಟೆ,
    5.ಕಡಬ: 22-12-2023 ರಂದು ಬೆಳಿಗ್ಗೆ 10 ಗಂಟೆಯಿಂದ, ಗಂಟೆ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು ನೂಜಿಬಾಳ್ತಿಲ, ಕಡಬ
    6.ಮೂಡಬಿದ್ರೆ: 23-12-2023 ರಂದು ಬೆಳಿಗ್ಗೆ 10 ಗಂಟೆಯಿಂದ, ತಾಲ್ಲೂಕು ಕ್ರೀಡಾಂಗಣ (ಸ್ವರಾಜ್ ಮೈದಾನ),ಮೂಡಬಿದ್ರೆ
  2. ಸುಳ್ಯ: 26-12-2023 ರಂದು ಬೆಳಿಗ್ಗೆ 10 ಗಂಟೆಯಿಂದ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸುಳ್ಯ
    8.ಮಂಗಳೂರು: 30-12-2023 ರಂದು ಬೆಳಿಗ್ಗೆ 10 ಗಂಟೆಯಿಂದ, ಮಂಗಳಾ ಕ್ರೀಡಾಂಗಣ, ಮಂಗಳೂರು
    ಕಿರಿಯರ ವಿಭಾಗ – 5ನೇ ತರಗತಿ
    ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ 2024 ರ ಜೂನ್ 01 ಕ್ಕೆ 11 ವರ್ಷ ಒಳಗಿನವರಾಗಿರಬೇಕು.
    ಕಿರಿಯರ ವಿಭಾಗ – 8ನೇ ತರಗತಿ
    ಪ್ರಸ್ತುತ ವರ್ಷ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿಗೆ 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆಯಬೇಕು ಹಾಗೂ 2024 ರ ಜೂನ್ 01 ಕ್ಕೆ 14 ವರ್ಷ ಒಳಗಿನವರಾಗಿರಬೇಕು.
    ತಾಲೂಕು ಮಟ್ಟದಲ್ಲಿ ಅರ್ಹತೆ ಪಡೆದು ರಾಜ್ಯ ಮಟ್ಟದ ಕ್ರೀಡಾ ಶಾಲೆ/ನಿಲಯಕ್ಕೆ ಆಯ್ಕೆ ಬಯಸುವವರು 2024 ರ ಜನವರಿ 19 ರಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಇಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಫುಟ್ ಬಾಲ್,ಜಿಮ್ನಾಸ್ಟಿಕ್ಸ್, ಹಾಕಿ, ಜೂಡೋ, ವಾಲಿಬಾಲ್ ಮತ್ತು ಕುಸ್ತಿ ಕ್ರೀಡೆಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು.

ಹಿರಿಯರ ವಿಭಾಗ
ಹಿರಿಯ ವಿಭಾಗದ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ ಆಯ್ಕೆ ಬಯಸುವ ಕ್ರೀಡಾಪಟುಗಳು ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, 2024-25ನೇ ಸಾಲಿಗೆ ಪ್ರಥಮ ಪಿ.ಯು.ಸಿ. ಗೆ ಪ್ರವೇಶ ಪಡೆಯಲು ಅರ್ಹತೆ ಪಡೆದು, 2024 ರ ಜೂನ್ 01 ಕ್ಕೆ 17 ವರ್ಷ ಒಳಗಿನವರಾಗಿರಬೇಕು.
ಹಿರಿಯ ವಿಭಾಗಕ್ಕೆ ಆಯ್ಕೆ ಬಯಸುವ ಕ್ರೀಡಾಪಟುಗಳು 2024 ರ ಜನವರಿ 20 ರಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗವಹಿಸಬೇಕು.
ಇಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್ ಬಾಲ್, ಫುಟ್ ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಜೂಡೋ, ವಾಲಿಬಾಲ್ ಮತ್ತು ಕುಸ್ತಿ ಕ್ರೀಡೆಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು.
ಜಿಲ್ಲಾ ಮತ್ತು ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಂಬಂಧಪಟ್ಟ ತಾಲೂಕುಗಳಲ್ಲಿ ಭಾಗವಹಿಸುವಂತೆ ತಿಳಿಸಿದೆ. ಸಂಬಂಧಪಟ್ಟ ತಾಲೂಕಿನಲ್ಲಿ ಭಾಗವಹಿಸಲು ಸಾಧ್ಯವಾಗದೇ ಇದ್ದಲ್ಲಿ ಜಿಲ್ಲೆಯ ಇತರೆ ತಾಲೂಕಿನಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವ ವಿದ್ಯಾರ್ಥಿಗಳು ದೃಢೀಕೃತ ಜನನ ಪ್ರಮಾಣ ಪತ್ರವನ್ನು ತರಬೇಕು..
ಹೆಚ್ಚಿನ ಮಾಹಿತಿಗಾಗಿ ತರಬೇತುದಾರರನ್ನು ಮೊಬೈಲ್ ಸಂಖ್ಯೆ- 7019144302, 9008848289 ಅಥವಾ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ದೂರವಾಣಿ ಸಂಖ್ಯೆ- 0824- 2451264 ಕರೆ ಮಾಡಿ ಸಂಪರ್ಕಿಸುವಂತೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles