ಕಾಪು: ಹಿರಿಯ ರಂಗಕರ್ಮಿ, ಸಮಾಜ ಸೇವಕ , ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು ಕಾಪು ಲೀಲಾಧರ ಶೆಟ್ಟಿ(68) ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ (59) ಅವರು ಆತ್ಮಹತ್ಯೆ ಮಾಡಿಕೊ೦ಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಮಂಗಳವಾರ ಮಧ್ಯರಾತ್ರಿ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊ೦ಡಿರುವುದಾಗಿ ವರದಿಯಾಗಿದೆ.
ಜಿಲ್ಲಾ ಕಬಡ್ಡಿ ಸಂಸ್ಥೆಯ ಉಪಾಧ್ಯಕ್ಷರು,ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಲೀಲಾಧರ ಶೆಟ್ಟಿ ಅವರು ಕಲಾ ಸಂಘಟಕ, ಕಲಾಪೋಷಕರಾಗಿ
ಧಾರ್ಮಿಕ, ಜನಪದ, ಶೈಕ್ಷಣಿಕ ಕ್ಷೇತ್ರಗಳ ಪೋಷಕರಾಗಿ ಗುರುತಿಸಲ್ಪಟ್ಟಿದ್ದರು. ರಂಗಕರ್ಮಿಯು ಆಗಿ ಕಳೆದ ಹಲವಾರು ವರ್ಷಗಳಿಂದ ನಾಟಕ ತಂಡವನ್ನು ಮುನ್ನಡೆಸಿ ನಾಟಕ ನಿರ್ದೇಶನ, ನಟರಾಗಿ ಕೂಡಾ ಜನಪ್ರಿಯತೆ
ಗಳಿಸಿದ್ದರು.