ಮಂಗಳೂರು: ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯಡಿ, ನಿರ್ವಾಹಕರು ಮತ್ತು ಕ್ಲೀನರ್ಗಳನ್ನು ನೋಂದಣೆ ಮಾಡಲು ಖಾಸಗಿ ಬಸ್ಸುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನಿರ್ವಾಹಕರು ಮತ್ತು ಕ್ಲೀನರ್ಗಳಿಗೆ ಅರಿವು ಕಾರ್ಯಕ್ರಮ ಮತ್ತು ನೋಂದಣಿ ಕಾರ್ಯಾಗಾರ ನಗರದ ಸ್ಟೇಟ್ಬ್ಯಾಂಕ್ ಬಸ್ ಸ್ಟ್ಯಾಂಡ್ನಲ್ಲಿ ಡಿಸೆಂಬರ್ 12 ರಂದು ಹಮ್ಮಿಕೊಳ್ಳಲಾಯಿತು.
ಜಿಲ್ಲೆಯ ಖಾಸಗಿ ವಾಣಿಜ್ಯ ಸಾರಿಗೆ ವಾಹನಗಳ ಕಂಡೆಕ್ಟರ್, ಕ್ಲೀನರ್ಗಳು ಈ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ಕಾರ್ಮಿಕ ಅಧಿಕಾರಿ ಕಚೇರಿ ದ.ಕ ಉಪವಿಭಾಗ-1&2, ಮಹಿಳಾ ಐಟಿಐ ಹತ್ತಿರ, ಶರ್ಬತ್ಕಟ್ಟೆ ಕೆಪಿಟಿ, ಮಂಗಳೂರು ಇಲ್ಲಿ ಭೇಟಿ ನೀಡಿ ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ: 0824-2435343, 0824-2433132 ಸಂಪರ್ಕಿಸುವಂತೆ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.