ಮ೦ಗಳೂರು: ಸರಕಾರಿ ಸ್ವಾಮ್ಯದ ಸಂಸ್ಥೆ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ನಿರ್ದೇಶನದಲ್ಲಿ ಡಿ.21ರಿಂದ 24ರವರೆಗೆ ಬಳ್ಳಾಲ್ ಬಾಗ್‌ನಲ್ಲಿರುವ ರೋಹನ್ ಸಿಟಿ ಸ್ಕ್ವೇರ್ ಕಟ್ಟಡದಲ್ಲಿ ದ್ರಾಕ್ಷಾ ರಸ ಬೃಹತ್ ಪ್ರದರ್ಶನ -ವೈನ್ ಮೇಳವನ್ನು ಆಯೋಜಿಸಲಾಗಿದೆ.
ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ, ಕರ್ನಾಟಕ ದ್ರಾಕ್ಷಾ ರಸ ಮಂಡಳಿ ಹಾಗೂ ಕರ್ನಾಟಕದ ವೈನರಿಗಳ ಸಹಕಾರದೊಂದಿಗೆ ದ್ರಾಕ್ಷಾ ರಸದ ಉತ್ಪಾದನೆ, ದಾಸ್ತಾನು ಹಾಗೂ ದ್ರಾಕ್ಷಾ ರಸದ ಪೇಯವನ್ನು ಸವಿಯುವ ವಿಧಾನ ಮಾತ್ರವಲ್ಲದೆ ಉತ್ತಮ ಆರೋಗ್ಯಕರ ಪಾನೀಯ ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಹಿತ ದೃಷ್ಟಿಯಿಂದ ಬೆಳೆಗೆ ಉತ್ತಮ ಬೇಡಿಕೆ ಹಾಗೂ ಬೆಲೆ ಸಿಗುವ ಉದ್ದೇಶದೊ೦ದಿಗೆ
‘ಪ್ರದರ್ಶನ -ಸವಿಯುವಿಕೆ- ಮಾರಾಟ’ ಎಂಬ ಘೋಷವಾಕ್ಯದೊಂದಿಗೆ ವೈನ್ ಮೇಳ ಆಚರಿಸಲ್ಪಡುತ್ತಿದ್ದು ದ್ರಾಕ್ಷಾ ರಸ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯಾಕರ್ಷಕ ದರ ಹಾಗೂ ಅತ್ಯುತ್ತಮ ಕೊಡುಗೆಗಳೊಂದಿಗೆ ಮಾರಾಟವನ್ನು ಏರ್ಪಡಿಸಲಾಗಿದೆ. ನಗರದ ರತ್ನಾಸ್ ವೈನ್ ಗೇಟ್ ಹಾಗೂ ರೋಹನ್ ಕಾರ್ಪೊರೇಷನ್ ಸಹಭಾಗಿತ್ವದಲ್ಲಿ ಬಿಎಂ ಡಬ್ಲ್ಯೂ ಆಟೋ ಹೌಸ್, ಹೋಟೆಲ್ ಬಿಎಂಎಸ್ ಸಹಯೋಗ ನೀಡಿದೆ ಎಂದು ಪ್ರಕಟನೆ ತಿಳಿಸಿದೆ.