ಮಂಗಳೂರು: ಮಂಗಳೂರು ತಾಲ್ಲೂಕು ಅಡ್ಡೂರು ಗ್ರಾಮದ ಕೆಳಗಿನ ಕೆರೆ ಎಂಬಲ್ಲಿ ಡಿ. 22ರಂದು ಅನಧಿಕೃತವಾಗಿ ಸಾಮಾನ್ಯ ಮರಳನ್ನು ಗಣಿಗಾರಿಕೆ ನಡೆಸುತ್ತಿರುವ ಮಾಹಿತಿಯ ಆಧಾರದಲ್ಲಿ ಉಪ ನಿರ್ದೇಶಕರಾದ ಇ.ಸಿ ದ್ವಿತೀಯ ಮತ್ತು ಭೂವಿಜ್ಞಾನಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಸಾಮಾನ್ಯ ಮರಳು ಗಣಿಗಾರಿಕೆಯಲ್ಲಿ ಬಳಕೆಯಾಗಿದ್ದ 5 ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶದಲ್ಲಿ ದಾಸ್ತಾನಿರಿಸಿದ್ದ ಮರಳನ್ನು ವಶಪಡಿಸಿಕೊಂಡಿದ್ದು, ಭೂಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.