26.5 C
Karnataka
Saturday, November 23, 2024

ಬಿ.ಸಿ ರೋಡು: ಹೋಟೆಲ್ ನ ಶಟರ್ ಬಾಗಿಲಿನ ಬೀಗ ಮುರಿದು ಹಣ ಕಳವು

ಬಂಟ್ವಾಳ : ಬಿ.ಸಿ .ರೋಡು ಮುಖ್ಯ ರಸ್ತೆಯಲ್ಲಿರುವ ಹೊಟೇಲ್ ವೊ೦ದರ ಶಟರ್ ಬಾಗಿಲಿನ ಬೀಗ ಮುರಿದು ಹಣ ಕಳವು ಮಾಡಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ. 25ರಂದು ಮಧ್ಯರಾತ್ರಿ ಮ್ಯಾನೇಜರ್ ಹೊಟೇಲ್ ಬಂದ್ ಮಾಡಿ ಮನೆಗೆ ಹೋಗಿದ್ದು, ಬೆಳಿಗ್ಗೆ 5.30 ಗಂಟೆಯ ವೇಳೆಗೆ ಹೊಟೇಲ್ ನಲ್ಲಿ ಬೆಳಿಗ್ಗೆ ಕೆಲಸ ಮಾಡುವ ಸಿಬ್ಬ೦ದಿ ಹೊಟೇಲ್ ತೆರೆಯಲು ಬಂದಾಗ ಶಟರ್ ಬಾಗಿಲಿನ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿ ಕಳ್ಳತನ ನಡೆಸಿರುವುದು ಕ೦ಡುಬ೦ತು. ಸಿಬ್ಬ೦ದಿ ಹೊಟೇಲ್ ನ ಮ್ಯಾನೇಜರ್ ಗೆ ಕರೆ ಮಾಡಿ ತಿಳಿಸಿದರು. ಅವರು ಕೂಡಲೇ ಹೋಟೇಲ್ ಗೆ ಬಂದು ನೋಡಿದಾಗ ಹೊಟೇಲ್ ನ ಶಟರ್ ಬೀಗ ಮುರಿದಿದ್ದು, ಕ್ಯಾಶ್ ಬಾಕ್ಸ್ ನ್ನು ಚೆಕ್ಕು ಮಾಡಿದಾಗ ಅದರಲ್ಲಿರಿಸಿದ್ದ ರೂ. 1,08,000/- ನಗದು ಹಣ ಕಳವು ಆಗಿತ್ತು ದೂರಿನಲ್ಲಿ ವಿವರಿಸಲಾಗಿದೆ..

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles