ಬಂಟ್ವಾಳ : ಮು೦ಜಾನೆ ನಾಲ್ಕು ಮ೦ದಿಯ ತ೦ಡ ಮನೆಗೆ ನುಗ್ಗಿ ಮಹಿಳೆಯರಿಗೆ ಚಾಕು ತೋರಿಸಿ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿರುವ ಘಟನೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಬಿ.ಸಿ.ರೋಡು – ಬೆಳ್ತಂಗಡಿ ರಾಜ್ಯ ಹೆದ್ದಾರಿ ರಸ್ತೆಯ ತಿಮ್ಮಕ್ಕ ಉದ್ಯಾನವನ ಸಮೀಪದ ಮೇನಾಡು ಎಂಬಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಮೆರಿಟಾ ಸಿಂತಿಯಾ ಪಿಂಟೋ ಎ೦ಬವರು ಮೇನಾಡು ಎಂಬಲ್ಲಿ ತನ್ನ ಪ್ರಾಯಸ್ಥ ತಾಯಿಯ ಜೊತೆ ವಾಸ್ತವ್ಯವಿದ್ದು ಗುರುವಾರ ಮುಂಜಾನೆ 4 ಮ೦ದಿ ಅಪರಿಚಿತರು ಬಂದು ಮನೆಯ ಕಾಲ್ ಬೆಲ್ ಒತ್ತಿದ್ದರು. , ಈ ವೇಳೆ ಪಿಂಟೋ ಅವರು ಬಾಗಿಲು ತೆಗೆದಾಗ ಅವರನ್ನು ಹಾಗೂ ಅವರ ತಾಯಿಯನ್ನು ಚಾಕು ತೋರಿಸಿ ಬೆದರಿಸಿದ ಆರೋಪಿಗಳು, ಮನೆಯ ಒಳಗೆ ಜಾಲಾಡಿ, ಕಪಾಟಿನಲ್ಲಿದ್ದ ಅಂದಾಜು 3,20,000 ರೂ-ಮೌಲ್ಯದ ಒಟ್ಟು 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು, 2 ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿ ಬಳಿಕ ಬೆದರಿಕೆ ಒಡ್ಡಿ ಅವರಿಂದ 30,000 ರೂ ನಗದು ಹಣವನ್ನು ಪಡೆದು ಪರಾರಿಯಾಗಿರುತ್ತಾರೆ . ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ ರಿಷ್ಯಂತ್ ಐ.ಪಿ.ಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.