ಮಂಗಳೂರು, ಜ.11(ಕ.ವಾ):- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಜನವರಿ 12ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ.
ಶುಕ್ರವಾರ ಬೆಳಿಗ್ಗೆ 8.15ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ, 9- ಮಂಗಳಾದೇವಿಯ ರಾಮಕೃಷ್ಣ ಮಠದಲ್ಲಿ ನ್ಯಾಷನಲ್ ಯೂತ್ ಡೇ ಕಾರ್ಯಕ್ರಮ, 9.30- ಮಂಗಳಾ ಕ್ರೀಡಾಂಗಣದಲಿ,್ಲ ಮಂಗಳೂರು ಲಯನ್ಸ್ ಕ್ಲಬ್ ಆಯೋಜನೆಯ ವಿಕಲಚೇತನರ ಕ್ರೀಡಾಕೂಟ ಉದ್ಘಾಟನೆ, 10.15- ಜಿಲ್ಲಾ ಪಂಚಾಯತ್ ಆವರಣದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಾರ್ಮಾಡಿ ಹಸನಬ್ಬ ಅವರು ಪ್ರಾಯೋಜಿಸುವ ಆಂಬುಲೆನ್ಸ್ ಲೋಕಾರ್ಪಣೆ, 10.30- ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಸಭೆ, ಮಧ್ಯಾಹ್ನ 2.30 – ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆ, ಸಂಜೆ 6.40ಕ್ಕೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.